Basadi 31 | Halebelagola

Shri Parshvanatha Basadi at Halebelagola

ಹಳೆಬೆಳಗೊಳದ ಭ. ಶ್ರೀ ಪಾಶ್ವನಾಥ ಸ್ವಾಮಿ ಬಸದಿ

ಶ್ರವಣಬೆಳಗೊಳದಿಂದ ಉತ್ತರಕ್ಕೆ ಆರು ಕಿ.ಮೀ. ದೂರದಲ್ಲಿರುವ ಚಿಕ್ಕಗ್ರಾಮವೇ ಹಳೇಬೆಳಗೊಳ. ಈ ಗ್ರಾಮವನ್ನು ಶ್ರವಣಬೆಳಗೊಳದ ಮೂಲಸ್ಥಳವೆಂದು ವಿದ್ವಾಂಸರು ಗುರುತಿಸಿದ್ದಾರೆ. ಶ್ರವಣಬೆಳಗೊಳದೆಡೆಗೆ ಬಂದ ಮುನಿಗಳು ಮೊದಲಲ್ಲಿ ಇಲ್ಲಿಯೇ ಹಲವಾರು ವರ್ಷಗಳ ನೆಲಸಿದ್ದರು. ಇಲ್ಲಿರುವ ಪಾಶ್ರ್ವನಾಥ ಜೈನಬಸದಿಯನ್ನು ಗಂಗರ ಮಂತ್ರಿ ಚಾವುಂಡರಾಯನ ಮಗ ಜಿನ್ನಣದೇವನಿಂದ ಒಂಬತ್ತು-ಹತ್ತನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ವಿದ್ವಾಂಸರು ಉಲ್ಲೇಖ ಮಾಡಿದ್ದಾರೆ. ಈ ಬಸದಿಯು ಗಂಗರ ವಾಸ್ತುಶೈಲಿಯನ್ನು ಹೊಂದಿದ್ದು ಹೊಯ್ಸಳರ ಕಾಲದಲ್ಲಿ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿ ಜಿನಬಿಂಬ ಸ್ಥಾಪಿಸಿ ಮುಖಮಂಟಪವನ್ನು ನಿರ್ಮಿಸಲಾಗಿದೆ. ಪಾಳುಬಿದ್ದಿದ್ದ ಶ್ರೀ ಪಾಶ್ರ್ವನಾಥ ಬಸದಿ ಬಸದಿಯನ್ನು 2018ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಈ ಬಸದಿಯ ಒಳಭಾಗ ನವರಂಗ ಮಂಟಪವು ಶಿಲ್ಪಕಲೆಗಳಿಂದ ಕೂಡಿದೆ. ಮಧ್ಯದ ಭುವನೇಶ್ವರಿಯಲ್ಲಿ ದೇವಿಯರ ಸಹಿತ ಅಷ್ಟದಿಕ್ಪಾಲಕರನ್ನು ರಥಾರೂಢರಾಗಿ ಸುಂದರವಾಗಿ ಕೆತ್ತಲ್ಪಟ್ಟಿದೆ. ಮಧ್ಯದಲ್ಲಿ ಐದು ಹೆಡೆಗಳ ಧರಣೇಂದ್ರ ಯಕ್ಷರ ಪ್ರತಿಮೆ ಇದೆ. ಹೊಯ್ಸಳರ ದೊರೆ ವಿಷ್ಣುವರ್ಧನನ ತಂದೆ ಎರೆಯಂಗನು ಬೆಳಗೊಳದ ಜಿನಾಲಯಗಳಿಗೆ ಜೀರ್ಣೋದ್ಧಾರಕ್ಕಾಗಿ ಜೈನಗುರು ಗೋಪನಂದಿಗಳಿಗೆ ರಾಚೇನಹಳ್ಳಿಯನ್ನು ದತ್ತಿಯಾಗಿ ಬಿಟ್ಟನೆಂದು ಶಿಲಾಲೇಖಗಳಿಂದ ತಿಳಿದು ಬರುತ್ತದೆ. ಈ ಬಸದಿಯನ್ನು ಶಕವರ್ಷ ಸುಮಾರು 1016ರಲ್ಲಿ ನಿರ್ಮಿಸಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇಲ್ಲಿನ ಕೆರೆಯ ಕಲ್ಲುಗಳಲ್ಲಿ ಬಸದಿಗಳ ಕೆತ್ತನೆಯ ಕಲ್ಲುಗಳಿದ್ದು, ಇದರಿಂದ ಹಿಂದೆ ಇಲ್ಲಿ ಇನ್ನೂ ಹಲವು ಬಸದಿಗಳಿದ್ದಿರಬಹುದು, ಅವುಗಳನ್ನು ಒಡೆದು ಕೆರೆಕಟ್ಟಲು ಉಪಯೋಗಿಸಿರಬಹುದೆಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.

About

About Shri Parshvanatha Basadi at Halebelagola

Year of establishment
9th or 10th century; restored in 2018
Established by
Jinnanadeva, son of the Ganga minister Chamundaraya
Main deity
Lord Parshvanatha
Timings
Usually open from 8:00 AM to 6:00 PM
Location
Open map

Halebelagola is a small village six kilometres north of Shravanabelagola. Scholars identify it as the original settlement of Shravanabelagola, where monks arriving in the region first lived for many years. They state that the Parshvanatha Jain Basadi here was built in the ninth or tenth century by Jinnanadeva, son of the Ganga minister Chamundaraya. The structure follows the Ganga architectural style. During the Hoysala period it was restored, a Jina image installed, and an entrance hall added. The ruined Parshvanatha Basadi was restored again in 2018. Its interior navaranga hall is rich in sculpture. In the central Bhuvaneshwari ceiling, the eight directional guardians and their consorts are beautifully shown riding chariots; at the centre is a five-hooded image of Dharanendra Yaksha. Inscriptions record that Ereyanga, father of Hoysala ruler Vishnuvardhana, granted Rachenahalli to the Jain teacher Gopanandi for restoring Belagola’s Jinalayas. Scholars therefore believe this Basadi may have been built around Shaka year 1016. Carved stones from Basadis are found in the village tank, leading scholars to suggest that several more Basadis once stood here and may have been dismantled to build the tank embankment.