Basadi 30 | Bastihalli

Shri Neminatha Basadi at Bastihalli

ಬಸ್ತಿಹಳ್ಳಿಯ ಭ. ಶ್ರೀ ನೇಮಿನಾಥ ಸ್ವಾಮಿ ಬಸದಿ

ಶ್ರೀಕ್ಷೇತ್ರ ಶ್ರವಣಬೆಳಗೊಳದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ಬಸದಿಹಳ್ಳಿಯಲ್ಲಿ ಸುಮಾರು 12ನೇ ಶತಮಾನದಲ್ಲಿ ನಿರ್ಮಾಣವಾದ ಭ. ಶ್ರೀ ನೇಮಿನಾಥ ತೀಥರ್ಂಕರರ ಬಸದಿಯು ಸರಳ ವಾಸ್ತುವನ್ನು ಹೊಂದಿದೆ. ಈ ಬಸದಿಯನ್ನು ಹೊಂದಿರುವುದರಿಂದಲೇ ಈ ಊರಿಗೆ ‘ಬಸದಿಹಳ್ಳಿ’ ಎಂಬ ಹೆಸರು ಬಂದಿದೆ. ಗರ್ಭಗುಡಿಯಲ್ಲಿ ಐದು ಅಡಿ ಎತ್ತರದ ಭ. ಶ್ರೀ ನೇಮಿನಾಥ ತೀಥರ್ಂಕರರ ಭವ್ಯವಾದ ಮೂರ್ತಿಯಿದೆ. ಬಸದಿಯ ಶಿಖರವು ಪಿರಮಿಡಾಕಾರದ ಪಾಂಸನ ಶೈಲಿಯಲ್ಲಿ ಶೋಭಿಸುತ್ತಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿರುವ ಈ ಬಸದಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತ ಪ್ರತಿಮೆಯ ಪೀಠದಲ್ಲಿ ಉಲ್ಲೇಖಿಸಿರುವ ಶಾಸನದಲ್ಲಿ “ಶ್ರೀ ಮೂಲಸಂಘ ದೇಶೀಯಗಣ ಪುಸ್ತಕಗಚ್ಛ ಕೊಂಡಕುಂದಾನ್ವಯ ಶ್ರೀಮನ್ನಯಕೀರ್ತಿ ಸಿದ್ಧಾಂತಚಕ್ರವರ್ತಿಗಳ ಶಿಷ್ಯರು ನೇಮಿಚಂದ್ರ ಪಂಡಿತದೇವರ ಶಿಷ್ಯರು ಚಿಕ್ಕನೇಮಿಚಂದ್ರದೇವರು ಮಾಡಿಸಿದ ನೇಮಿಸ್ವಾಮಿಗಳು ಮಂಗಳ ಮಹಾ ಶ್ರೀ ಶ್ರೀ ಶ್ರೀ” ಎಂದು ಉಲ್ಲೇಖಿಸಲಾಗಿರುವುದರಿಂದ ಭ. ಶ್ರೀ ನೇಮಿನಾಥ ತೀಥರ್ಂಕರರ ಬಸದಿಯನ್ನು ‘ಚಿಕ್ಕನೇಮಿಚಂದ್ರ ದೇವರು’ ಮಾಡಿಸಿರುವರೆಂದು ತಿಳಿದುಬರುತ್ತದೆ. ಗರ್ಭಗುಡಿಯಲ್ಲಿ ಒಂದು ಅಡಿ ಎತ್ತರದ ಸಿಂಹಪೀಠದ ಮೇಲೆ ಸ್ಥಾನಕ ಭಂಗಿಯಲ್ಲಿರುವ ಐದು ಅಡಿ ಎತ್ತರದ, 22 ನೇ ತೀಥರ್ಂಕರರಾದ ಭಗವಾನ್ ನೇಮಿನಾಥ ಮೂರ್ತಿಯು ಪ್ರತಿಷ್ಠಾಪಿತವಾಗಿದೆ. ಮೂರ್ತಿಯ ಭುಜದ ಬಳಿ ಎರಡು ಚಾಮರಗಳನ್ನು ಕಾಣಬಹುದು. ಕಪ್ಪುಕಲ್ಲಿನಲ್ಲಿ ಕಡೆದಿರುವ ಮೂರ್ತಿಯ ಕಾಲಿನ ಬಳಿ ನೇಮಿನಾಥನ ಯಕ್ಷ ಯಕ್ಷಿಯರಾದ ಗೋಮೇಧ ಯಕ್ಷ ಮತ್ತು ಅಂಬಿಕಾ ಯಕ್ಷಿಯರನ್ನು ಕಾಣಬಹುದು. ಮೂರ್ತಿಯ ಶಿರದ ಮೇಲೆ ಮುಕ್ಕೊಡೆಯಿದ್ದರೆ ಹಿಂಭಾಗದಲ್ಲಿ ಸುರುಳಿಯಾಕಾರದ ಸುಂದರವಾದ ಮಕರ ತೋರಣವಿದೆ.

About

About Shri Neminatha Basadi at Bastihalli

Year of establishment
Around the 12th century
Established by
Chikka Nemichandra Deva
Main deity
Lord Neminatha
Timings
Usually open from 8:00 AM to 6:00 PM
Location
Open map

At Bastihalli, about four kilometres from the sacred centre of Shravanabelagola, stands a simply designed Basadi of Lord Neminatha Tirthankara built around the twelfth century. The village itself took the name ‘Basadihalli’ from this shrine. The sanctum contains a majestic five-foot image of Lord Neminatha, and the tower is an attractive pyramidal phamsana structure. An inscription on the pedestal of the Hoysala-period image states that Chikka Nemichandra Deva—disciple of Nemichandra Pandita Deva, who was himself a disciple of Nayakirti Siddhantachakravarti of the Mulasangha, Deshiya Gana, Pustaka Gachchha, and Kundakunda lineage—commissioned Lord Neminatha. Thus Chikka Nemichandra Deva is understood to have built the Basadi. The five-foot standing image of the twenty-second Tirthankara, Lord Neminatha, is installed on a one-foot lion-throne. Two fly-whisks appear near its shoulders. Beside the feet of the black-stone image are Neminatha’s attendants, Gomeda Yaksha and Ambika Yakshi. A triple parasol rises over the head, and a beautiful scrolling makara arch forms the backdrop.