Basadi 29 | Bekka

Shri Parshvanatha Basadi at Bekka

ಬೆಕ್ಕದ ಭ. ಶ್ರೀ ಪಾಶ್ರ್ವನಾಥ ಬಸದಿ

ಕ್ರಿ ಶ 1173ರಲ್ಲಿ ಭಂಡಾರಿ ಹುಳ್ಳಮಯ್ಯರು ಬೆಕ್ಕ ಗ್ರಾಮದಲ್ಲಿ ಭ. ಶ್ರೀ ಪಾಶ್ರ್ವನಾಥ ಬಸದಿಯನ್ನು ನಿರ್ಮಿಸಿದರು. ಇದನ್ನು ಮೆಚ್ಚಿ ಹೊಯ್ಸಳ ಸಾಮ್ರಾಜ್ಯದ ಅಧಿಪತಿ ಎರಡನೇ ಬಲ್ಲಾಳನು ನಿತ್ಯ ಪೂಜೆ ಮತ್ತು ನೈವೇದ್ಯಕ್ಕಾಗಿ ದಾನ ದತ್ತಿಗಳನ್ನು ನೀಡಿದ್ದು, ಈ ದಾನವನ್ನು ನಯಕೀರ್ತಿದೇವರ ಶಿಷ್ಯರಾದ ಭಾನುಕೀರ್ತಿದೇವರು ಸ್ವೀಕರಿಸಿದ್ದಾಗಿ ಬಸದಿಯ ಮುಂದೆ ಇರುವ ಶಾಸನದಲ್ಲಿ ಉಲ್ಲೇಖವಿದೆ. ಶ್ರವಣಬೆಳಗೊಳದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಬೆಕ್ಕ ಗ್ರಾಮದ ಮಧ್ಯೆ ಇರುವ ಭ. ಶ್ರೀ ಪಾಶ್ರ್ವನಾಥ ಬಸದಿಯು ಎತ್ತರದ ವೇದಿಕೆಯ ಮೇಲೆ ನಿರ್ಮಾಣವಾಗಿದ್ದು, ಬಸದಿಯು ಮುಖಮಂಟಪ, ನವರಂಗ, ಸುಕನಾಸಿ ಮತ್ತು ಗರ್ಭಗುಡಿ-ಯನ್ನೊಳಗೊಂಡಿದೆ. ಮುಖಮಂಟಪಕ್ಕೆ ಎರಡು ಕಂಬಗಳ ಆಧಾರವಿದ್ದರೆ, ನವರಂಗದಲ್ಲಿ ರುದ್ರಕಾಂತ ಶೈಲಿಯ ಮತ್ತು ಗಾತ್ರದ ನಾಲ್ಕು ಕಂಬಗಳಿವೆ. ನವರಂಗದ ಛಾವಣಿಯಲ್ಲಿ ಪದ್ಮಮಂಡಲದ ಸುಂದರವಾದ ವಿತಾನಗಳಿವೆ. ನವರಂಗ ಮತ್ತು ಶುಕನಾಸಿಯ ಲಲಾಟದಲ್ಲಿ ಧ್ಯಾನಾಸಕ್ತ ಜಿನ ಮೂರ್ತಿಗಳಿವೆ.

ಗರ್ಭಗುಡಿಯಲ್ಲಿ ಕಡುಗಪ್ಪು ಕಲ್ಲಿನಲ್ಲಿ ಕಡೆದಿರುವ ಭ. ಶ್ರೀ ಪಾಶ್ರ್ವನಾಥ ತೀಥರ್ಂಕರರ ಭವ್ಯವಾದ ಮೂರ್ತಿಯ ಹಿಂಭಾಗದಲ್ಲಿ ಸೂಕ್ಷ್ಮ ಕೆತ್ತನೆಯ ಮಕರ ತೋರಣವಿದೆ. ಮೂರ್ತಿಯ ಎರಡು ಕಡೆ ಧರಣೇಂದ್ರ ಯಕ್ಷ ಮತ್ತು ಪದ್ಮಾವತಿ ಯಕ್ಷಿಯರ ಮೂರ್ತಿಗಳಿವೆ. ಮೂರ್ತಿಯ ಪೀಠದಲ್ಲಿಯೂ ಸಹ ಒಂದು ಶಾಸನವಿದ್ದು ಹನಸೋಗೆಯ ನಯಕೀರ್ತಿದೇವರು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾಗಿ ತಿಳಿಯುತ್ತದೆ. ಬಸದಿಯ ಮುಂಭಾಗ ಇರುವ ಐದು ಅಡಿ ಎತ್ತರದ ಜೈನ ಶಾಸನದಲ್ಲಿ ಬಸದಿಯ ನಿರ್ಮಾಣ, ಹೊಯ್ಸಳ ಸಾಮ್ರಾಜ್ಯದ ವಂಶಾವಳಿ, ಬಿರುದುಬಾವಲಿಗಳು, ಹುಳ್ಳಮಯ್ಯನ ವಿಶೇಷತೆ ಮತ್ತು ಬಸದಿಗೆ ನೀಡಿದಂತಹ ದಾನದತ್ತಿಗಳ ಮಾಹಿತಿಯಿದೆ.

About

About Shri Parshvanatha Basadi at Bekka

Year of establishment
AD 1173
Established by
Bhandari Hullamayya
Main deity
Lord Parshvanatha
Timings
Usually open from 8:00 AM to 6:00 PM
Location
Open map

In AD 1173, Bhandari Hullamayya built Shri Parshvanatha Basadi in the village of Bekka. Pleased by this, Hoysala ruler Ballala II granted endowments for daily worship and offerings. An inscription in front records that Bhanukirti Deva, disciple of Nayakirti Deva, received the grant. Situated in the centre of Bekka, about eight kilometres from Shravanabelagola, the Basadi stands on a high platform and contains an entrance hall, navaranga, sukhanasi, and sanctum. Two pillars support the entrance hall, while the navaranga has four Rudrakanta-style pillars. Its ceiling has beautiful lotus-medallion canopies, and meditating Jina figures appear on the lintels of the navaranga and sukhanasi.

In the sanctum, the majestic image of Shri Parshvanatha Tirthankara is carved from deep-black stone and backed by a finely carved makara arch. Images of Dharanendra Yaksha and Padmavati Yakshi stand on either side. An inscription on the pedestal records that Nayakirti Deva of Hanasoge installed the image. A five-foot-high Jain inscription in front gives information about the Basadi’s construction, the Hoysala imperial genealogy and titles, Hullamayya’s distinction, and the endowments granted to the shrine.