Basadi 28 | Jinanathapura

Shri Parshvanatha Basadi at Jinanathapura (Aregallu Basadi)

ಜಿನನಾಥಪುರದ ಭ. ಶ್ರೀ ಪಾಶ್ರ್ವನಾಥ ಬಸದಿ (ಅರೆಗಲ್ಲು ಬಸದಿ)

ಅರೆಗಲ್ಲು ಬಸದಿ ಹೆಸರೇ ಸೂಚಿಸುವಂತೆ ಅರೆಗಲ್ಲು ಅಥವಾ ಆರೆಕಲ್ಲು ಎಂದು ಕರೆಯಲ್ಪಡುವ ಕಲ್ಲುಹಾಸಿನ ಮೇಲೆ ನಿರ್ಮಾಣವಾಗಿದೆ. ಬಸದಿಯು ಜಿನನಾಥಪುರದ ಪೂರ್ವದ ಅಂಚಿನಲ್ಲಿ, ಎತ್ತರವಾದ ವೇದಿಕೆಯ ಮೇಲೆ ಉತ್ತರಾಭಿಮುಖವಾಗಿ ನಿರ್ಮಿತವಾಗಿದೆ. ಮುಖಮಂಟಪ ಹಾಗೂ ತೆರೆದ ಜಗಲಿಯನ್ನು ಹೊಂದಿರುವ ಈ ಬಸದಿಯ ಗರ್ಭಗೃಹದಲ್ಲಿ ಐದು ಅಡಿ ಎತ್ತರದ, ಹನ್ನೊಂದು ಹೆಡೆಯುಳ್ಳ ಭ. ಶ್ರೀ ಪಾಶ್ರ್ವನಾಥರ ಸುಂದರವಾದ ಮೂರ್ತಿಯಿದೆ. ಶ್ವೇತಾಂಬರ ಸಂಪ್ರದಾಯದ ಕಾನಜೀ ಸ್ವಾಮಿಯವರು ಈ ಬಸದಿಯಲ್ಲಿನ ಭ. ಶ್ರೀ ಪಾಶ್ರ್ವನಾಥ ಸ್ವಾಮಿಯ ಚಿತ್ರಪಟದ ದರ್ಶನ ಮಾತ್ರದಿಂದಲೇ ಪ್ರಭಾವನೆಗೊಂಡು ದಿಗಂಬರ ಪರಂಪರೆಯನ್ನು ಸ್ವೀಕಾರ ಮಾಡಿ, ಮುಖಪಟ್ಟಿಯನ್ನು ತೆಗೆದುಹಾಕಿದ್ದರು. ವಾಸ್ತುವಿನ ಮೊದಲನೇ ಅಂಗವಾದ ಅಧಿಷ್ಠಾನವು ಮಂಚಕ ಮತ್ತು ಕಾಪೋತಬಂಧ ರೀತಿಯದಾಗಿದೆ. ಉಪಾನ, ಜಗತೀ, ತ್ರಿಪಟ್ಟ, ಕುಮುದ, ಕಂಪ, ಮತ್ತು ಕಾಪೋತ-ಗಳನ್ನೊಳಗೊಂಡ ಅಧಿಷ್ಠಾನವನ್ನು ಕಾಪೋತಬಂಧ ಅಧಿಷ್ಠಾನವೆನ್ನುವರು. ಅರೆಗಲ್ಲು ಬಸದಿಯ ಅಧಿಷ್ಠಾನವು ಇದೇ ರೀತಿಯದ್ದಾಗಿದ್ದು, ವಿಶೇಷವೆಂದರೆ ಇಲ್ಲಿ ಅಧಿಷ್ಠಾನದ ಕೆಳಗೆ ಉಪಪೀಠವಿದೆ. ತರೆದ ಜಗುಲಿ, ಮುಖಮಂಟಪ ಸುಂದರವಾಗಿದೆ. ಇದು ಜೀರ್ಣೋದ್ಧಾರ-ಗೊಂಡಿರುವ ಬಸದಿಯಾಗಿರುವುದರಿಂದ ಮೂಲಸ್ವರೂಪ ಸಂಪೂರ್ಣ ಬದಲಾಗಿದೆ. ಇದರ ಭಿತ್ತಿಯು ಗಾರೆಯಿಂದ ನಿರ್ಮಿತವಾಗಿದೆ. ನಾಲ್ಕು ಕಂಬಗಳುಳ್ಳ ನವರಂಗ, ಅಂತರಾಳ ಮತ್ತು ಗರ್ಭಗೃಹವೆಂಬ ಮೂರು ಭಾಗಗಳು ಕಂಡುಬರುತ್ತವೆ.

About

About Shri Parshvanatha Basadi at Jinanathapura (Aregallu Basadi)

Year of establishment
Date to be confirmed
Established by
To be confirmed
Main deity
Lord Parshvanatha
Timings
Usually open from 8:00 AM to 6:00 PM
Location
Open map

As its name suggests, Aregallu Basadi is built on a stone pavement called aregallu or arekallu. It stands on a high platform at the eastern edge of Jinanathapura and faces north. The Basadi has an entrance hall and an open porch; its sanctum contains a beautiful five-foot image of Lord Parshvanatha with eleven serpent hoods. Kanaji Swami of the Shvetambara tradition was so deeply influenced merely by seeing a picture of this Parshvanatha that he adopted the Digambara tradition and removed his mouth-cloth. The first architectural member, the base, is of the manchaka and kapotabandha type. A kapotabandha base comprises upana, jagati, tripatta, kumuda, kampa, and kapota mouldings. Aregallu Basadi has such a base, distinguished by an additional sub-base beneath it. Its open porch and entrance hall are attractive. Restoration has completely changed the original form. The walls are built of mortar. The interior consists of a four-pillared navaranga, vestibule, and sanctum.