Basadi 26 | Chandragiri

Cave of the Last Shrutakevali, Bhadrabahu

ಅಂತಿಮ ಶ್ರುತಕೇವಲಿ ಭದ್ರಬಾಹು ಗುಹೆ

ಭ. ಶ್ರೀ ಮಹಾವೀರ ಸ್ವಾಮಿಯ 8ನೇ ಉತ್ತರಾಧಿಕಾರಿಯಾದ ಅಂತಿಮ ಶ್ರುತಕೇವಲಿ ಆಚಾರ್ಯ ಭದ್ರಬಾಹು ಮನಿಗಳು ಉತ್ತರ ಭಾರತದಲ್ಲಿ 12 ವರ್ಷ ಬರಗಾಲ ಬಂದು ಮುನಿಗಳ ಆಚರಣೆಗೆ ಅಡಚಣೆಯಾಗುತ್ತದೆ ಎಂದು ತಮ್ಮ ಜ್ಞಾನದಿಂದ ಅರಿತು, ಚಂದ್ರಗುಪ್ತ ಮೌರ್ಯ ಹಾಗೂ 12 ಸಾವಿರ ಮುನಿಸಂಘದೊಂದಿಗೆ ದಕ್ಷಿಣ ಭಾರತದ ಅಂದಿನ ಕಳ್ವಪ್ಪು ಅಥವಾ ಕಟವಪ್ರಗಿರಿಗೆ (ಇಂದಿನ ಶ್ರವಣಬೆಳಗೊಳ) ಆಗಮಿಸಿದರು. ಚಂದ್ರಗಿರಿಯಲ್ಲಿ, ಆಗ್ನೇಯ ದಿಕ್ಕಿನಲ್ಲಿರುವ, ಬಂಡೆ ಕೆಳಗಿನ ಪ್ರಾಕೃತಿಕವಾದ ಗುಹೆಯಲ್ಲಿ ತಪೋನಿರತರಾಗಿ ಸಮಾಧಿ ಹೊಂದಿದರು. ನಂತರ ಆಚಾರ್ಯ ಭದ್ರಬಾಹುಗಳ ಪಾದವನ್ನು ಕೆತ್ತಿಸಿ, ಈ ಗುಹೆಯನ್ನು ಅಭಿವೃದ್ಧಿಪಡಿಸಲಾಯಿತು. ಇಂದು ಈ ಸ್ಥಳವು ಭಕ್ತರ ಶ್ರದ್ಧಾಕೇಂದ್ರವಾಗಿ ಪೂಜನೀಯ ಸ್ಥಳವಾಗಿದೆ. ಭದ್ರಬಾಹು ಗುಹೆಯು ಶ್ರಮಣ ಪರಂಪರೆ ಹಾಗೂ ಚಂದ್ರಗಿರಿ ಇತಿಹಾಸದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

About

About Cave of the Last Shrutakevali, Bhadrabahu

Year of establishment
Ancient cave tradition; date to be confirmed
Established by
Associated with Acharya Bhadrabahu and Chandragupta Maurya
Main deity
Bhadrabahu footprints and cave shrine
Timings
Usually open from 8:00 AM to 6:00 PM
Location
Open map

The last Shrutakevali, Acharya Bhadrabahu Muni, the eighth successor of Lord Mahavira, foresaw through his knowledge that a twelve-year famine would occur in North India and obstruct the monks’ observances. He therefore came south with Chandragupta Maurya and an order of twelve thousand monks to Kalvappu, or Katavapragiri, now Shravanabelagola. On Chandragiri, he practised austerities in a natural cave beneath a rock on the southeastern side and attained samadhi. Bhadrabahu’s footprints were later carved and the cave developed. Today it is a sacred centre of devotion. Bhadrabahu Cave plays an important role in illuminating the Shramana tradition and the history of Chandragiri.