Basadi 25 | Chandragiri

Lord Shri Parshvanatha Basadi (Antarala Parshvanatha Basadi)

ಭ. ಶ್ರೀ ಪಾಶ್ರ್ವನಾಥ ಸ್ವಾಮಿ ಬಸದಿ (ಅಂತರಾಳ ಪಾಶ್ರ್ವನಾಥ ಬಸದಿ)

ಚಿಕ್ಕ ಬೆಟ್ಟದ ಬಾಗಿಲಿನ ಎದುರಿಗೆ ಇರುವ ಕಟ್ಟಡವೇ ಪಾಶ್ರ್ವನಾಥ ಬಸದಿ ಅಥವಾ ಕಮಠ ಪಾಶ್ರ್ವನಾಥ ಬಸದಿ. ಎತ್ತರವಾಗಿರುವ ಈ ಬಸದಿಯನ್ನು ಹೊಯ್ಸಳರ ಕಾಲದಲ್ಲಿ ಗಟ್ಟಿಗಲ್ಲನ್ನು ಬಳಸಿ ನಿರ್ಮಿಸಲಾಗಿದೆ. ಬಸದಿಯ ಒಳಭಾಗದಲ್ಲಿ ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪವಿದೆ. ಗರ್ಭಗೃಹವು ಎತ್ತರವಾಗಿದ್ದು ಸು.15 ಅಡಿ ಎತ್ತರದ ಭ. ಶ್ರೀ ಪಾಶ್ರ್ವನಾಥ ತೀರ್ಥಂಕರರ ಬಳಪದಕಲ್ಲಿನ ಮೂರ್ತಿ ಇದೆ. ಪಾಶ್ರ್ವನಾಥರ ಮೂರ್ತಿಯ ಮೇಲೆ ಏಳು ಹೆಡೆಗಳ ಸರ್ಪವಿದ್ದು ಬಹು ಅಲಂಕಾರಿಕವಾಗಿದೆ. ಸರ್ಪದ ತಲೆ, ಕಣ್ಣು ನಾಲಿಗೆ ಹಾಗೂ ತಲೆ ಮೇಲೆ ಮಣಿ ಇರುವುದನ್ನು ಗುರುತಿಸಬಹುದು. ಪಾಶ್ರ್ವನಾಥರ ಕಾಲುಗಳ ಬಳಿ ಸುಂದರ ಚಿಕಣಿ ಶಿಲ್ಪಗಳಿವೆ. ಪಾಶ್ರ್ವನಾಥ ಬಸದಿಯಲ್ಲಿನ ಶಾಸನದ ಪ್ರಕಾರ ಈ ಬಸದಿಯನ್ನು ಧಾಮನಂದಿ ತ್ರೈವಿದ್ಯ ದೇವರ ಶಿಷ್ಯರಾದ ಧನಕೀರ್ತಿದೇವರು ಮಾಡಿಸಿರುತ್ತಾರೆ. ನವರಂಗದ ‘ಕಲ್ಲು ಕಟ್ಟು' ಮತ್ತು ನೃತ್ಯಮಂಟಪಗಳನ್ನು ಕ್ರಿ.ಶ. 1195ರ ಸುಮಾರಿನಲ್ಲಿ ಪಟ್ಟಣ ಸ್ವಾಮಿ ನಾಗದೇವ ಮಾಡಿಸುತ್ತಾನೆ. ಬಸದಿಯ ಅಂತರಾಳದ ಗೋಡೆಗಳಲ್ಲಿ ಹೊಯ್ಸಳರ ಕಾಲಕ್ಕೆ ಸೇರಿದ ಧರಣೇಂದ್ರ ಮತ್ತು ಪದ್ಮಾವತಿ ದೇವಿಯ ಬಣ್ಣದ ರೇಖಾ ಚಿತ್ರಗಳಿದ್ದು ಈಗ ಅವು ಮಸುಕಾಗಿವೆ.ನವರಂಗದ ಬಲಕ್ಕಿರುವ ನಿಶದಿಗಲ್ಲು ಹೊಯ್ಸಳರ ಸುಂದರವಾದ ಕಲಾಕೃತಿಗಳಲ್ಲಿ ಒಂದು. ಕ್ರಿ.ಶ.1129ರ ಈ ನಿಸದಿ ಶಾಸನವನ್ನು ಮದನ ಮಹೇಶ್ವರ ಮಲ್ಲಿನಾಥ ಬರೆದನೆಂದೂ, ಬಿರುದ ರೂವಾರಿ ಮುಖ ತಿಲಕ ಗಂಗಾಚಾರಿ ಕೆತ್ತಿದಂತೆ ತಿಳಿಸುತ್ತದೆ.

About

About Lord Shri Parshvanatha Basadi (Antarala Parshvanatha Basadi)

Year of establishment
Around AD 1195 enclosure; inscription of AD 1129
Established by
Dhanakirti Deva; enclosure and dance halls by Nagadeva
Main deity
Lord Parshvanatha
Timings
Usually open from 8:00 AM to 6:00 PM
Location
Open map

The building opposite the entrance to Chikkabetta is Parshvanatha Basadi, also called Kamatha Parshvanatha Basadi. This tall Hoysala-period monument is built of hard stone and contains a sanctum, vestibule, navaranga, and entrance hall. The lofty sanctum houses an approximately fifteen-foot soapstone image of Lord Parshvanatha Tirthankara. Its highly ornamental seven-hooded serpent shows clearly carved head, eyes, tongue, and jewel. Fine miniature sculptures appear near Parshvanatha’s feet. According to an inscription, Dhanakirti Deva, disciple of Dhamanandi Traividya Deva, built the Basadi. Around AD 1195, town chief Nagadeva constructed the stone enclosure and dance halls of the navaranga. Faded Hoysala-period line paintings of Dharanendra and Goddess Padmavati survive on the vestibule walls. The memorial stone to the right of the navaranga is a fine Hoysala work. Its inscription of AD 1129 was composed by Madana Maheshwara Mallinatha and carved by Gangachari, who bore the titles Biruda Ruvari and Mukhatilaka.