Basadi 24 | Chandragiri

Lord Shri Adinatha Basadi (Kattale Basadi)

ಭ. ಶ್ರೀ ಆದಿನಾಥ ಸ್ವಾಮಿ ಬಸದಿ (ಕತ್ತಲೆ ಬಸದಿ)

ಹೊಯ್ಸಳ ವಿಷ್ಣುವರ್ಧನನ ದಂಡನಾಯಕನಾಗಿದ್ದ ಗಂಗರಾಜನು ಕ್ರಿ.ಶ. 1118ರಲ್ಲಿ ತನ್ನ ತಾಯಿ ಪೋಚವ್ವೆಗಾಗಿ ಈ ಬಸದಿಯನ್ನು ಕಟ್ಟಿಸಿದಂತೆ ಇಲ್ಲಿನ ಶಾಸನ ತಿಳಿಸುತ್ತದೆ. ಗಂಗರಾಜನು ಈ ಬಸದಿಯನ್ನು ಜೀರ್ಣೋದ್ದಾರ ಮಾಡಿಸಿದ್ದಾರೆ. ಬಸದಿಯು ಸಾಂಧಾರ ರೀತಿಯ ಗರ್ಭಗೃಹ, ತೆರೆದ ಅಂತರಾಳ, ವಿಶಾಲವಾದ ನವರಂಗವಿದೆ. ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಭ. ಶ್ರೀ ಆದಿನಾಥರ ಬಿಂಬ ಪ್ರತಿಷ್ಠಾಪಿತವಾಗಿದೆ. ಅಂತರಾಳವು ಗರ್ಭಗೃಹಕ್ಕಿಂತ ವಿಶಾಲವಾದುದಾಗಿದ್ದು, ನವರಂಗದ ಮದ್ಯದಲ್ಲಿನ ನಾಲ್ಕು ಪ್ರಧಾನ ಕಂಬಗಳು ಗಂಗರ ಕೆಲವು ಅಪರೂಪದ ಮಾದರಿಗಳಾಗಿವೆ. ಇವು ಎತ್ತರವೂ ಇರುವುದರಿಂದ ಭಾರಿ ಗಾತ್ರದವಾಗಿದ್ದು, ಚೌಕಾಕಾರದ ಪೀಠದ ಮೇಲೆ ನಿಂತಿವೆ. ನವರಂಗದ ಮಧ್ಯೆ ಇರುವ ಮುಚ್ಚಿಗೆಯಲ್ಲಿ ಅಗಲವಾದ ಪದ್ಮವಿದ್ದು, ಸುತ್ತಲೂ ಎರಡು ಸುತ್ತಿನ ದಳಗಳಿಂದ ಆಲಂಕರಣಗೊಂಡಿದೆ. ಮುಚ್ಚಿಗೆಯಲ್ಲಿ ಹಸಿರು, ನಸುಗೆಂಪು, ಬಿಳಿ ಬಣ್ಣವನ್ನು ಬಳಸಿ ರಚಿಸಿದ ರೇಖಾ ಗೆರೆ ಚಿತ್ರಗಳನ್ನೂ ಇಲ್ಲಿ ಕಾಣಬಹುದಾಗಿದೆ. ಚಾಮುಂಡರಾಯ ಬಸದಿಯಂತೆ ಬಸದಿಯ ಆಗ್ನೆಯ ಮೂಲೆಯಲ್ಲಿ ಮೇಲಕ್ಕೆ ಹೋಗಲು ಮೆಟ್ಟಿಲುಗಳಿವೆ. ಹೊರಬಾಗಿಲ ಲಲಾಟದ ಕೂಟ, ಶಾಲಾ, ಪಂಜರ ಕೋಷ್ಟಗಳ ಅಲಂಕಾರವನ್ನು ಬಿಡಿಸಿದೆ. ಬಸದಿ ನಿರ್ಮಾಣವಾದಾಗ ಹಾಗೂ ಮುಂದೆ ಒಂದೆರಡು ಶತಮಾನಗಳು ಚಂದ್ರಗುಪ್ತ ಬಸದಿಗೂ ಇದಕ್ಕೂ ಮಧ್ಯೆ ಸ್ಥಳವಿತ್ತು. ಸು. 15ನೆಯ ಶತಮಾನದ ನಂತರ ಕತ್ತಲೆ ಬಸದಿ ಹಾಗೂ ಚಂದ್ರಗುಪ್ತ ಬಸದಿ ಎರಡನ್ನೂ ಸೇರಿಸಿ ತೆರೆದ ಮಂಟಪಮೊಂದನ್ನು ನಿರ್ಮಿಸಲಾಗಿದೆ. ಹಿಂದಿನ ಕಾಲದಲ್ಲಿ ಬೆಳಕಿನ ಪ್ರವೇಶ ಬಸದಿಗೆ ದುಸ್ತರವಾದ ಕಾರಣದಿಂದ ಕತ್ತಲೆ ಬಸದಿ ಎಂದು ರೂಢಿಗತವಾಗಿದೆ.

About

About Lord Shri Adinatha Basadi (Kattale Basadi)

Year of establishment
AD 1118
Established by
Gangaraja, general of Hoysala Vishnuvardhana, for his mother Pochavve
Main deity
Lord Adinatha
Timings
Usually open from 8:00 AM to 6:00 PM
Location
Open map

An inscription records that Gangaraja, general of Hoysala Vishnuvardhana, built this Basadi for his mother Pochavve in AD 1118; he also restored it. The Basadi has a sandhara-type sanctum, open vestibule, and spacious navaranga, with a circumambulatory passage around the sanctum. An image of Lord Adinatha is installed there. The vestibule is wider than the sanctum. Four principal pillars at the centre of the navaranga are rare Ganga types: tall and massive, they stand on square bases. The central ceiling bears a broad lotus surrounded by two rows of petals, together with painted linear designs in green, pale red, and white. As at Chamundaraya Basadi, stairs at the southeast corner lead upward. The exterior doorway lintel has kuta, shala, and panjara-niche ornament. When the Basadi was built and for a century or two afterward, an open space separated it from Chandragupta Basadi. After about the fifteenth century, an open hall was constructed joining the two. Because daylight once entered the shrine only with difficulty, it became popularly known as Kattale, or ‘Dark,’ Basadi.