Basadi 21 | Chandragiri

Lord Shri Anantanatha Basadi (Majjigana Basadi)

ಭ. ಶ್ರೀ ಅನಂತನಾಥ ಸ್ವಾಮಿ ಬಸದಿ (ಮಜ್ಜಿಗಣ ಬಸದಿ)

ಶಾಸನಮೊಂದರಲ್ಲಿ ಬರುವ ಪದದಿಂದ ಮಜ್ಜಿಗಣ ಹೆಸರಿನ ಮೂಲವನ್ನು ಗುರುತಿಸಬಹುದು. ‘ನಮಿಲೂರಾ ಸಿರಿಸಂ ಘದಾಜಿಗಣದಾ' ಎಂಬಲ್ಲಿನ 'ಆಜಿಗಣ'ವೇ ಈ ಹೆಸರಿನ ಮೂಲವಾಗಿದ್ದು, (ಶ್ರೀಮತ್+ಆಜಿಗಣ) ಮುಂದೆ ಇದು ಮಜ್ಜಿಗಣವಾಯಿತು. ನವಿಲೂರ ಶ್ರೀಸಂಘದ ಅನೇಕ ಮುನಿಗಳು ಈ ಬಸದಿಯ ಬಳಿ ನೋನ್ತು, ಮುಡುಪಿರುವಂತೆ ಉಲ್ಲೇಖವಿರುವ ಶಾಸನಗಳು ದೊರೆಯುವುದರಿಂದ ಆ ಗಣದವರೇ ಇದನ್ನು ಕಟ್ಟಿಸಿರಬಹುದು. ಸುಮಾರು 11 ಶಾಸನಗಳು ಈ ಗಣವನ್ನು ಹೆಸರಿಸುತ್ತವೆ. ಈ ಶಾಸನಗಳ ಕಾಲ 8ನೆಯ ಶತಮಾನ.

ಈಗಿನ ಮಜ್ಜಿಗಣ್ಣ ಬಸದಿ ಅನೇಕ ಸಾರಿ ಜೀರ್ಣೋದ್ದಾಗೊಂಡಿದೆ. ಗರ್ಭಗೃಹ, ತೆರೆದ ಅಂತರಾಳ, ನವರಂಗಗಳನ್ನು ಹೊಂದಿದ್ದು, ಸಣ್ಣಮುಖ ಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿನ ಅನಂತನಾಥರ ಶಿಲ್ಪ ಹೊಯ್ಸಳರ ಕಾಲದ್ದು. ನವರಂಗದ ಕಂಬಗಳಲ್ಲಿ ಬಾಗಿಲ ಎಡಗಡೆಯಿರುವ ಕಂಬ ಬಳಪದ ಕಲ್ಲಿನದಾಗಿದ್ದು ಉಳಿದವು ಗಟ್ಟಿಗಲ್ಲಿನವು. ಬೋದಿಗೆ ಸಹ ಗಟ್ಟಿಗಲ್ಲಿನದು. ನವರಂಗದ ಮುಚ್ಚಿಗೆಯಲ್ಲಿ ಅಷ್ಟದಳದ ಪದ್ಮವಿದೆ. ಬಾಗಿಲವಾಡದ ಎರಡೂ ಕಡೆಯ ನಿಲುವುಗಳು ಪದ್ಮದಳಾಲಂಕಾರಗಳಿಂದ ಕೂಡಿದೆ. ಗೋಡೆಗಳಲ್ಲಿ ಜೀರ್ಣೋದ್ಧಾರ ಸಮಯದಲ್ಲಿ ಸೇರಿಸಿರುವ ಅಲಂಕೃತ ಶಿಲಾ ಫಲಕಗಳಿವೆ. ಆದರೆ ಮೊದಲೇ ಹೇಳಿರುವಂತೆ ಆಜಿಗಣದ ಶಾಸನಗಳು ಈ ಬಸದಿಯ ಬಳಿ ದೊರೆಯುವುದರಿಂದ ಇದನ್ನು ಆಜಿಗಣದ ಬಸದಿಯೆಂದು ಗುರುತಿಸಿರುವುದರಿಂದ ಇದು ಎಂಟು ಅಥವಾ ಒಂಭತ್ತನೆಯ ಶತಮಾನದಲ್ಲಿ ರಚಿತವಾಗಿರಬೇಕು. ನಂತರದಲ್ಲಿ ಜೀರ್ಣೋದ್ಧಾರ ಕ್ರಿಯೆಗೆ ಹಲವು ಬಾರಿ ಒಳಗಾಗಿ ಇಂದಿನ ಬಾಹ್ಯರೂಪವನ್ನು ತಳೆಯಿತೆಂದು ಬಹುದಾಗಿದೆ.

About

About Lord Shri Anantanatha Basadi (Majjigana Basadi)

Year of establishment
Probably 8th or 9th century
Established by
Members of the Navilur Shrisangha / Ajigana tradition
Main deity
Lord Anantanatha
Timings
Usually open from 8:00 AM to 6:00 PM
Location
Open map

The origin of the name Majjigana can be traced to a word in an inscription. In the phrase ‘Namilura Sirisanghada Ajigana,’ the term ‘Ajigana’—from Shrimat plus Ajigana—later became Majjigana. Inscriptions found near the Basadi record that many monks of the Navilur Shrisangha undertook vows and died here, suggesting that members of that gana built it. About eleven inscriptions name this group, all dating to the eighth century.

The present Majjigana Basadi has been restored many times. It contains a sanctum, open vestibule, navaranga, and a small entrance hall. The Anantanatha image in the sanctum is Hoysala-period work. Of the navaranga pillars, the one to the left of the doorway is soapstone and the others are hard stone; the bracket is also hard stone. The navaranga ceiling bears an eight-petalled lotus. The jambs on both sides of the doorway have lotus-petal ornament, and the walls contain decorated stone panels added during restoration. Since the Ajigana inscriptions were found nearby and this has been identified as their Basadi, it was probably built in the eighth or ninth century. Repeated restorations subsequently gave it its present outward form.