Basadi 20 | Chandragiri

Lord Shri Shantinatha Basadi (Kone Shantishwara Basadi)

ಭ. ಶ್ರೀ ಶಾಂತಿನಾಥ ಸ್ವಾಮಿ ಬಸದಿ (ಕೋನೆ ಶಾಂತೀಶ್ವರಬಸದಿ)

ಚಿಕ್ಕಬೆಟ್ಟದಲ್ಲಿ ಉತ್ತರಾಭಿಮುಖವಾಗಿರುವ ಬಸದಿಗಳಲ್ಲಿ ಕೋನೆ ಶಾಂತೀಶ್ವರ ಬಸದಿಯೂ ಒಂದಾಗಿದ್ದು ಲಕ್ಕಿದೊಣೆಯ ಕಡೆಯ ಗೋಡೆಯ ಬಳಿ ಇದೆ. ಇಲ್ಲಿ ಬೆಟ್ಟ ಇಳಿಜಾರಾಗಿರುವುದರಿಂದ ಭೂಮಿಯನ್ನು ಸಮತಟ್ಟು ಮಾಡಿಕೊಂಡು ವೇದಿಕೆ ನಿರ್ಮಿಸಿ ಅದರ ಮೇಲೆ ಈ ಬಸದಿಯನ್ನು ನಿರ್ಮಿಸಿರುತ್ತಾರೆ. ಈ ಬಸದಿಯು ಹೊಯ್ಸಳರ ಕಾಲದ್ದಾಗಿದ್ದು, ಇದನ್ನು ಗಂಗರಾಜನ ಸೋದರನಾದ ಹಿರಿಯ ಏಚಿಮಯ್ಯ ಕ್ರಿ.ಶ. 1117 ರಲ್ಲಿ ಕಟ್ಟಿಸಿದಂತೆ ಶಾಸನ ತಿಳಿಸುತ್ತದೆ. ಈ ಬಸದಿಯ ಒಳಗಡೆ ಹೊಯ್ಸಳರ ಕಾಲದ ಕಂಬಗಳು, ಮುಚ್ಚಿಗೆ ಮುಂತಾದ ಲಕ್ಷಣಗಳನ್ನು ಹೊಂದಿದ್ದರೆ ಹೊರಗಡೆ ಅಂತಹ ಲಕ್ಷಣಗಳನ್ನು ಹೊಂದಿಲ್ಲ. ಅಧಿಷ್ಠಾನದ ಭಾಗಗಳು ಎರಡು ಕಟ್ಟೆ ಬಸದಿಯಂತೆ ಇವೆ. ಇದಕ್ಕೆ ಬಳಸಿರುವ ಕಲ್ಲು ಗಟ್ಟಿಗಲ್ಲು. ಗರ್ಭಗೃಹ, ತೆರೆದ ಅಂತರಾಳ, ನವರಂಗವನ್ನು ಹೊಂದಿರುವ ಈ ಬಸದಿಯಲ್ಲಿ ಗರ್ಭಗೃಹ ಚಿಕ್ಕದಾಗಿದ್ದು, ತೆರೆದ ಅಂತರಾಳ ಅದರಷ್ಟೇ ದೊಡ್ಡದಿದೆ. ಚೌಕಾಕಾರದ ನವರಂಗದಲ್ಲಿ 10 ಕಂಬಗಳಿದ್ದು, ನವರಂಗದ ಮಧ್ಯೆ ಪೂರ್ವ-ಪಶ್ಚಿಮವಾಗಿ ನಾಲ್ಕು ಕಂಬಗಳು ಹಾಗೂ ಉತ್ತರ-ದಕ್ಷಿಣವಾಗಿ ಮೂರು ಮೂರು ಕಂಬಗಳಿವೆ. ನವರಂಗದಲ್ಲಿನ ಕಂಬಗಳ ತಳಭಾಗ ಚೌಕಾಕಾರದ ಪಿಂಡಿ ಮೇಲೆ ವೃತ್ತಾಕಾರವಾಗಿದ್ದು, ತಿರುಗಣಿಯಿಂದ ಮಾಡಿದ ಕಂಬಗಳಾಗಿವೆ. ಬೋದಿಗೆಗಳು ಸರಳವಾಗಿದ್ದು ಮಧ್ಯೆ ಸ್ವಲ್ಪ ಉಬ್ಬಿದ ಪಟ್ಟಿ ಬಂದಿದೆ. ನವರಂಗದ ಮುಚ್ಚಿಗೆಯ ಕಂಬ ಸ್ವಲ್ಪ ಉಬ್ಬಿದೆ. ಶಾಂತೀಶ್ವರನ ಶಿಲ್ಪ 12-13ನೆಯ ಶತಮಾನಕ್ಕೆ ಸೇರಿದ ಶಿಲ್ಪವಾಗಿದ್ದು, ಇದರ ಮೇಲೆ ಇರುವ ಗೋಪುರ ಇಟ್ಟಿಗೆಯ ದಾಗಿದ್ದು ಹಂತ ಹಂತವಾಗಿದ್ದು ಫಾಂಸನ ಮಾದರಿಯಲ್ಲಿದೆ.

About

About Lord Shri Shantinatha Basadi (Kone Shantishwara Basadi)

Year of establishment
AD 1117
Established by
Hiriyachayya, elder brother of Gangaraja
Main deity
Lord Shantinatha
Timings
Usually open from 8:00 AM to 6:00 PM
Location
Open map

Kone Shantishwara Basadi is one of the north-facing Basadis on Chikkabetta and stands near the wall on the Lakkidone side. Because the hillside slopes here, the ground was levelled and a platform built to support the monument. An inscription records that Hiriyachayya, elder brother of Gangaraja, built this Hoysala-period Basadi in AD 1117. Its interior pillars and ceilings display Hoysala features, though the exterior does not. The parts of its base resemble those of Eradukatte Basadi and are made of hard stone. The Basadi contains a small sanctum, an open vestibule of the same size, and a navaranga. The square navaranga has ten pillars: four arranged east–west through the centre and three each on the north and south. Their bases are square, with lathe-turned circular shafts above. The brackets are simple, with a slightly projecting central band. A ceiling member in the navaranga is slightly raised. The Shantishwara sculpture belongs to the twelfth or thirteenth century. Above it is a stepped brick tower of the phamsana type.