Basadi 19 | Chandragiri

Lord Shri Bahubali Basadi (Terina Basadi)

ಭ. ಶ್ರೀ ಬಾಬಹುಬಲಿ ಸ್ವಾಮಿ ಬಸದಿ (ತೇರಿನ ಬಸದಿ)

ಬಾಹುಬಲಿಗೆ ಸ್ವಾಮಿ ಬಸದಿ ಬಳಿಯಲ್ಲಿ ಹೊಯ್ಸಳರ ಕಾಲದ ಸುಂದರವಾದ ಮಂದಾರ (ತೇರು)ವಿದ್ದು ಇದಕ್ಕೆ ತೇರಿನ ಬಸದಿ ಎಂಬ ಹೆಸರು ಬರಲು ಕಾರಣವಾಗಿದೆ. ಈ ಬಸದಿಯ ಮುಂದಿನ ತೇರಿನಲ್ಲಿ ಕ್ರಿ.ಶ. 1117 ರಲ್ಲಿ ಪೊಯ್ಸಳಸೆಟ್ಟಿ ಮತ್ತು ನೇಮಿಸೆಟ್ಟಿಯರ ತಾಯಂದಿರಾದ ಮಾಚಿಕಬ್ಬೆ ಮತ್ತು ಶಾಂತಕಬ್ಬೆಯರು ಈ ಬಸದಿಯ ಜಿನಬಿಂಬ ಮತ್ತು ಮಂದಾರವನ್ನು ನಿರ್ಮಿಸಿದ ಉಲ್ಲೇಖವಿದೆ. 15ನೆಯ ಶತಮಾನದಲ್ಲಿ ಗುಂಮಟಣ್ಣ ಈ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿರುತ್ತಾರೆ. ಈ ಬಸದಿಯೂ ಸಹ ಮೂಲತಃ ಹೊಯ್ಸಳರಿಗಿಂತ ಪ್ರಾಚೀನ ಬಸದಿಯಾಗಿದ್ದು ಎರಡಕ್ಕಿಂತ ಹೆಚ್ಚು ಬಾರಿ ಜೀರ್ಣೋದ್ಧಾರವಾಗಿದೆ. ಈ ಬಸದಿಗೆ ಒರಗಿಸಿರುವ ಎರಡು ವೀರಗಲ್ಲುಗಳು ಗಂಗರ ಕಾಲದ್ದಾಗಿದೆ. ಇದಲ್ಲದೆ ನವರಂಗದ ಕಂಬಗಳ ಆಧಾರದ ಮೇಲೆ ಇದರ ಕಾಲ ಕ್ರಿ.ಶ.ಸು. 950ಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ಈ ಬಸದಿಯು ಎರಡುಕಟ್ಟೆ ಮತ್ತು ಸವತಿಗಂಧವಾರಣ ಬಸದಿಗಿಂತ ಚಿಕ್ಕದಾಗಿದೆ. ಹೊರಭಾಗ ಆಯತಾಕಾರದಲ್ಲಿದ್ದು ಅಧಿಷ್ಠಾನದ ಸುತ್ತಲೂ ಎತ್ತರವಾದ ವೇದಿಯನ್ನು ಹೊಂದಿದೆ. ಅಂತರಾಳದವರೆಗಿನ ಗೋಡೆಯು ದಪ್ಪವಾಗಿದ್ದು ಇಟ್ಟಿಗೆಯದಾಗಿದೆ. ಗರ್ಭಗೃಹ, ತೆರೆದ ಅಂತರಾಳ ಚೌಕಾಕಾರದ ನವರಂಗವಿದೆ. ಅಂತರಾಳವು ಗರ್ಭಗೃಹಕ್ಕಿಂತ ದೊಡ್ಡದಾಗಿದೆ. ಗರ್ಭಗೃಹದಲ್ಲಿನ ಭ. ಶ್ರೀ ಬಾಹುಬಲಿ ಸ್ವಾಮಿಯ ಬಿಂಬವು ಹೊಯ್ಸಳರ ಕಾಲದ್ದಾಗಿದೆ. ಬಸದಿಯ ಮುಂದಿನ ತೇರು ಅಥವಾ ಮಂದಾರವು ಹೊಯ್ಸಳರ ಕಾಲದ್ದಾಗಿದ್ದು, ಜಗತಿ, ತ್ರಿಪಟ್ಟಕುಮುದ, ಪಟ್ಟಿಕಾದಿಂದ ಅಲಂಕೃತವಾಗಿದೆ. ಮೇಲಿನ ಭಾಗದಲ್ಲಿ ಅಧೋಮುಖ ಕಮಲವನ್ನು ಬಿಡಿಸಲಾಗಿದೆ. ಮಂದಾರವು ಆನೆ, ಸಿಂಹಗಳ ಶಿಲ್ಪಗಳಿಂದ ಅಲಂಕೃತವಾಗಿದೆ.

About

About Lord Shri Bahubali Basadi (Terina Basadi)

Year of establishment
Estimated around AD 950; Hoysala additions in AD 1117
Established by
Machikabbe and Shantakabbe commissioned the Jina image and mandara
Main deity
Lord Bahubali
Timings
Usually open from 8:00 AM to 6:00 PM
Location
Open map

Near Bahubali Basadi stands a beautiful Hoysala-period stone chariot or mandara, which gave the monument the name Terina Basadi, ‘Chariot Basadi.’ An inscription on it records that in AD 1117 Machikabbe and Shantakabbe, mothers of Poysalasetti and Nemisetti, commissioned the Jina image and the mandara. Gummatanna restored the Basadi in the fifteenth century. The monument is originally older than the Hoysala period and has been restored more than twice. Two hero-stones leaning against it belong to the Ganga period. From the navaranga pillars, the Basadi has been estimated to date to around AD 950.

This Basadi is smaller than Eradukatte and Savatigandhavarana Basadis. Its rectangular exterior stands on a high platform running around the base. Thick brick walls extend up to the vestibule. It has a sanctum, an open vestibule, and a square navaranga; the vestibule is larger than the sanctum. The image of Lord Bahubali in the sanctum belongs to the Hoysala period. The Hoysala-period chariot or mandara in front is ornamented with jagati, tripatta-kumuda, and pattika mouldings, with an inverted lotus above. Sculptures of elephants and lions further decorate it.