Basadi 18 | Chandragiri

Lord Shri Vrishabhanatha Basadi (Savatigandhavarana Basadi)

ಭ. ಶ್ರೀ ವೃಷಭನಾಥ ಸ್ವಾಮಿ ಬಸದಿ (ಸವತಿಗಂಧವಾರಣ ಬಸದಿ)

ಶ್ರವಣಬೆಳಗೊಳದ ಪ್ರಭಾಚಂದ್ರ ಮುನಿಗಳ ಶಿಷ್ಯೆಯಾದ, ವಿಷ್ಣುವರ್ಧನನ ಪಟ್ಟದರಾಣಿ ಶಾಂತಲೆಯು ಈ ಬಸದಿಯನ್ನು ಕ್ರಿ.ಶ. 1123ರಲ್ಲಿ ಕಟ್ಟಿಸಿ ಮಟ್ಟನವಿಲೆ ಗ್ರಾಮವನ್ನು ದತ್ತಿಯಾಗಿ ನೀಡಿದ್ದಾಗಿ ತಿಳಿದುಬರುತ್ತದೆ. ಶಾಂತಲೆಗೆ ‘ಸವತಿಗಂಧವಾರಣ' ಎಂಬ ಬಿರುದು ಇದ್ದುದರಿಂದ ಈ ಬಸದಿಗೆ ‘ಸವತಿಗಂಧವಾರಣ ಬಸದಿ' ಎಂಬ ಹೆಸರು ಬಂದಿದೆ. 15ನೆಯ ಶತಮಾನದಲ್ಲಿ ಗೇರುಸೊಪ್ಪೆಯ ಗುಂಮಟಣನು ಈ ಬಸದಿಯನ್ನು ಜೀರ್ಣೋದ್ಧಾರ ಮಾಡಿಸಿದ್ದರಿಂದ ಬಸದಿಯ ಮೂಲ ರೂಪ ಹೀಗೇ ಇತ್ತೆಂದು ಹೇಳುವುದು ಕಷ್ಟಸಾಧ್ಯ. ಬಸದಿಯಲ್ಲಿ ಗರ್ಭಗೃಹ, ಮುಚ್ಚಿದ ಅಂತರಾಳ ಮತ್ತು ವಿಶಾಲ ನವರಂಗವಿದೆ.

ಗರ್ಭಗೃಹದಲ್ಲಿ ಭ. ಶ್ರೀ ಆದಿನಾಥರ ಸುಂದರ ಮೂರ್ತಿ ಇದೆ. ಬಸದಿಯ ಮುಂದೆ ಎತ್ತರವಾದ ವೇದಿಕೆ ಇದೆ. ದೇವಾಲಯದ ಗೋಡೆ ಇಟ್ಟಿಗೆಯದಾಗಿದ್ದು ಬ್ರಹ್ಮಾಕಾಂತ ಮಾದರಿಯ ಉಬ್ಬು ಕಂಬಗಳಿವೆ. ಗರ್ಭಗೃಹದ ಮೇಲೆ ತ್ರಿತಳ ವಿಮಾನ ಬಂದಿದೆ. ಗರ್ಭಗೃಹವು ಚಿಕ್ಕದಾಗಿ ಆಯತಾಕಾರವಾಗಿದ್ದು, ಎಂಟು ಕಂಬಗಳನ್ನು ಹೊಂದಿದೆ. ಈ ಭಾಗದಲ್ಲಿ ಬಳಸಿರುವ ಬೋದಿಗೆಗಳು ಮತ್ತು ಕಂಬಗಳು ಗಟ್ಟಿಕಲ್ಲಿನಿಂದ ಮಾಡಲ್ಪಟ್ಟಿವೆ. ಇವು ಹೊಯ್ಸಳರ ಪೂರ್ವಕಾಲದ ಬಳಕೆ. ನವರಂಗದಲ್ಲಿನ ಮೊದಲ ಎರಡು ಕಂಬಗಳು ಸಣ್ಣಗೆ ಇದ್ದು ಚತುರ, ಅಷ್ಟ, ಚೌಕಾಕಾರವಾಗಿವೆ. ಎಂಟು ಮೂಲೆಯ ಭಾಗವೇ ಉದ್ದವಾಗಿರುವುದು. ಬಾಗಿಲ ಕಡೆಯ ನಾಲ್ಕು ಕಂಬಗಳು 16 ಮೂಲೆಯುಳ್ಳವಾಗಿದ್ದು ಮೇಲೆ ಕುಂಭ ಬರಬೇಕಾದ ಕಡೆ ಎಡೆಕಟ್ಟು ಬಂದಿದೆ. ಕಂಬಗಳ ಮೇಲೆ ಬಂದಿರುವ ಬೋದಿಗೆ ಸರಳವಾಗಿದ್ದು ಅದರಲ್ಲಿ ಸಣ್ಣ ಪಟ್ಟಿಯೊಂದು ಬಂದಿರುತ್ತದೆ. ಬಸದಿಯು ಜೀರ್ಣೋದ್ಧಾರ ಆಗುವಾಗ ನವರಂಗದ ಮಧ್ಯ ಭಾಗದಲ್ಲಿ ಬರಬೇಕಾದ ಮುಚ್ಚಿಗೆಯ ಕಮಲವು ಬಾಗಿಲ ಕಡೆಯ ಎರಡು ಕಂಬಗಳ ಮಧ್ಯೆ ಬಂದಿದೆ.

About

About Lord Shri Vrishabhanatha Basadi (Savatigandhavarana Basadi)

Year of establishment
AD 1123
Established by
Queen Shantala, chief queen of Vishnuvardhana
Main deity
Lord Adinatha / Vrishabhanatha
Timings
Usually open from 8:00 AM to 6:00 PM
Location
Open map

Shantala, chief queen of Vishnuvardhana and a disciple of Prabhachandra Muni of Shravanabelagola, built this Basadi in AD 1123 and endowed it with the village of Mattanavile. Because Shantala bore the title ‘Savatigandhavarana,’ the Basadi acquired that name. Gummatanna of Gerusoppe restored it in the fifteenth century, making its original form difficult to determine. It contains a sanctum, enclosed vestibule, and spacious navaranga.

The sanctum contains a beautiful image of Lord Adinatha. A high platform stands before the Basadi. Its walls are of brick and have engaged Brahmakanta-type pillars. A three-storeyed vimana rises over the small rectangular sanctum, which has eight pillars. The hard-stone brackets and pillars in this section are characteristic of the pre-Hoysala period. The first two navaranga pillars are slender, with square, octagonal, and again square sections; the octagonal section is elongated. The four pillars near the doorway are sixteen-sided, with a band where a pot-shaped member would normally occur. Their brackets are simple and carry a narrow band. During restoration, the ceiling lotus meant for the centre of the navaranga was placed between the two pillars near the doorway.