Basadi 17 | Chandragiri

Lord Shri Adinatha Basadi (Eradukatte Basadi)

ಭ. ಶ್ರೀ ಆದಿನಾಥ ಬಸದಿ (ಎರಡುಕಟ್ಟೆ ಬಸದಿ)

ಈ ಬಸದಿಯ ಎರಡು ಬದಿಯಲ್ಲಿ ಮೆಟ್ಟಿಲುಗಳಿರುವುದರಿಂದ ಎರಡು ಕಟ್ಟೆ ಬಸದಿ ಎಂದು ಹೆಸರಾಗಿದೆ. ಈ ಬಸದಿಯನ್ನು ಹಿಂದೆ ಗಂಗರಾಜ ಶ್ರೀಪುರುಷನ ಮಗನಾದ ದುಗ್ಗಮಾರನು ಕಟ್ಟಿಸಿದ ಬಗ್ಗೆ ಬಸದಿಯ ನವರಂಗದ ಕಂಬಮೊಂದರಲ್ಲಿನ ಅಪ್ರಕಟಿತ ಶಾಸನದಲ್ಲಿ ‘ನವಖಣ್ಣದನಾಲ್ಕುಕಮ್ಬಮನ್ ದುಗ್ಗಮಾರೋವಜ ಮಾಡಿದೋನ್' ಎಂದಿದೆ. ಈ ಬಸದಿ ಬಳಿಯಿರುವ ಶಾಸನದಲ್ಲಿ ಗಂಗರಾಜನು ಈ ಬಸದಿಗೆ ಪರಮ ಎಂಬ ಗ್ರಾಮವನ್ನು ದಾನ ನೀಡಿದ ಉಲ್ಲೇಖವಿದೆ. ಬಸದಿಯ ಹೊರ ರಚನೆ ಆಯತಾಕಾರವಾಗಿದ್ದು ಅಂತರಾಳದವರೆಗೆ ದಪ್ಪವಾಗಿದ ಇಟ್ಟಿಗೆಯ ಗೋಡೆ ಹೊಂದಿದೆ. ಬಸದಿಯು ಗರ್ಭಗೃಹ, ತೆರೆದ ಅಂತರಾಳ, ನವರಂಗ ಮತ್ತು ವೇದಿಕೆ ಭಾಗವನ್ನು ಹೊಂದಿದೆ. ಗರ್ಭಗೃಹ ಮತ್ತು ಅಂತರಾಳಗಳು ಒಂದೇ ಅಳತೆಯಲ್ಲಿದ್ದು ಚಿಕ್ಕದಾಗಿವೆ. ಗರ್ಭಗೃಹದಲ್ಲಿ ಭ. ಶ್ರೀ ಆದಿನಾಥ ತೀರ್ಥಂಕರರ ಬಿಂಬವು ಪ್ರಭಾವಳಿಯಿಂದ ಕೂಡಿದೆ. ಇಕ್ಕೆಲಗಳಲ್ಲಿ ಚಾಮರಧಾರಿಯರಿದ್ದಾರೆ. ಅಂತರಾಳದಲ್ಲಿ ಸರ್ವಾಹ್ಣ ಯಕ್ಷ ಹಾಗೂ ಕೂಷ್ಮಾಂಡಿನಿ ಯಕ್ಷಿಯರ ವಿಗ್ರಹಗಳಿವೆ. ಗರ್ಭಗೃಹದ ತೀರ್ಥಂಕರರ ಬಿಂಬವನ್ನು ಗಂಗರಾಜನ ಪತ್ನಿ ಲಕ್ಷ್ಮಿಯು ಸು. 1118ರಲ್ಲಿ ಕೆತ್ತಿಸಿ ಪ್ರತಿಷ್ಠಾಪಿಸಿದ್ದಾರೆ. ನವರಂಗದ ಮುಚ್ಚಿಗೆಯಲ್ಲಿ ಎರಡು ಹಂತದ ಎಂಟು ದಳದ ಪದ್ಮವಿದೆ. ಜೀರ್ಣೋದ್ದಾರ ಮಾಡಿದಾಗ ಈ ಬಸದಿಯು ಅನೇಕ ಬದಲಾವಣೆಗಳಿಗೆ ಒಳಗಾಗಿರುವುದು ಕಂಡುಬರುತ್ತದೆ. ಇದರ ಅಧಿಷ್ಠಾನವು ಶಾಸನ ಬಸದಿಯಂತೆ ಇದ್ದು ಎರಡೂ ಬಸದಿಗಳನ್ನು ಗಂಗರಾಜನ ಕುಟುಂಬದವರಿಂದ ಜೀರ್ಣೋದ್ಧಾರಗೊಂಡಿದೆ.

About

About Lord Shri Adinatha Basadi (Eradukatte Basadi)

Year of establishment
Ganga period; image installed around AD 1118
Established by
Duggamara, son of Ganga king Sripurusha; image commissioned by Lakshmi, wife of Gangaraja
Main deity
Lord Adinatha
Timings
Usually open from 8:00 AM to 6:00 PM
Location
Open map

Because there are steps on two sides, this monument is called Eradukatte, or ‘two-platform,’ Basadi. An unpublished inscription on a navaranga pillar states that Duggamara, son of Ganga king Sripurusha, built its nine bays and four pillars. A nearby inscription records that the Ganga king granted the village of Parama to the Basadi. The exterior is rectangular, with thick brick walls extending to the vestibule. It contains a sanctum, open vestibule, navaranga, and platform. The sanctum and vestibule are small and of equal size. In the sanctum is an aureoled image of Lord Adinatha with fly-whisk bearers on either side. The vestibule contains images of Sarvahna Yaksha and Kushmandini Yakshi. Lakshmi, wife of Gangaraja, commissioned and installed the Tirthankara image around 1118. The navaranga ceiling has a two-tiered, eight-petalled lotus. Repeated restoration brought many alterations. Its base resembles that of Shasana Basadi, and both Basadis were restored by members of Gangaraja’s family.