Basadi 16 | Chandragiri

Shri Neminatha Basadi (Chavundaraya Basadi)

ಭ. ಶ್ರೀ ನೇಮಿನಾಥ ಬಸದಿ (ಚಾವುಂಡರಾಯ ಬಸದಿ)

ಭ.ಶ್ರೀ ನೇಮಿನಾಥ ತೀರ್ಥಂಕರ ಅಥವಾ ಚಾಮುಂಡರಾಯ ಬಸದಿಯು ದಕ್ಷಿಣ ಭಾರತದ ಒಂದು ಸುಂದರವಾದ ದ್ರಾವಿಡ ಶೈಲಿಯ ಪ್ರಮುಖ ಬಸದಿಗಳಲ್ಲಿ ಒಂದಾಗಿದೆ. ಬಸದಿಯ ಮುಂಬದಿಯ ತಳಪಾಯದ ಇಕ್ಕೆಲಗಳಲ್ಲಿ ‘ಚಾಮುಂಡ ರಾಯಂ ಮಾಡಿಸಿದಂ' ಎಂಬ ಶಾಸನಗಳಿವೆ. ಈ ಶಾಸನದ ಅಕ್ಷರಗಳು 11 ನೆಯ ಶತಮಾನದವಾಗಿರುವುದರಿಂದ ಚಾಮುಂಡರಾಯನು ಈ ಬಸದಿ ಪೂರ್ಣವಾಗುವುದರೊಳಗಾಗಿ ಗತನಾಗಿದ್ದು ಅನಂತರ ಅವನ ಹೆಸರನ್ನು ಈ ಬಸದಿಗೆ ನೀಡಿರಬೇಕು. ಜಿನದೇವಣ್ಣ ಬೆಳ್ಗೊಳದ ಜನರೆಲ್ಲ ಹೊಗಳುವಂತೆ ಬಸದಿ ನಿರ್ಮಿಸಿದಂತೆ ಹೇಳಿಕೊಂಡಿರುತ್ತಾನೆ. ಗಂಗರಾಜನ ಮಗ ಏಚಣ್ಣನು ತ್ರೈಲೋಕ್ಯರಂಜನವೆಂಬ ಜೈನ ಚೈತ್ಯಾಲಯವನ್ನು ಮಾಡಿಸಿದಂತೆ ಹೇಳಿಕೊಂಡಿದ್ದಾನೆ. ಬಸದಿಯಲ್ಲಿನ ಭ. ಶ್ರೀ ನೇಮಿನಾಥ ತೀರ್ಥಂಕರರು ಹಾಗೂ ಯಕ್ಷ-ಯಕ್ಷಿಯ ಶಿಲ್ಪಗಳು ಹೊಯ್ಸಳರ ಕಾಲದವು. ಭ. ಶ್ರೀ ನೇಮಿನಾಥ ತೀರ್ಥಂಕರರ ಮೂರ್ತಿಯನ್ನು ಹೊಯ್ಸಳಾಚಾರಿಯ ಮಗ ಗಂಗಾಚಾರಿ ವರ್ಧಮಾನಾಚಾರಿ ಬಿರುದು ರೂವಾರಿ ಮುಖತಿಲಕ ಮಾಡಿದಂತೆ ಉಲ್ಲೇಖವಿದೆ. ಇದು ಗಂಗರ ಅಂತ್ಯ ಕಾಲದ ಹಾಗೂ ಡ್ರಾವಿಡ ಮಾದರಿಯ ಸುಂದರವಾದ ಕಟ್ಟಡವಾಗಿದೆ. ಗಂಗರ ಸೇನಾಪತಿ ಚಾಮುಂಡ ರಾಯ ಇದರ ನಿರ್ಮಾತ್ಯ ಗರ್ಭಗೃಹ, ತೆರೆದ ಅಂತರಾಳ, ನವರಂಗ ಹಾಗೂ ಮುಖ ಮಂಟಪವನ್ನೂ ಹೊಂದಿರುವ ಇದರ ಅಂತರಾಳ ಮತ್ತು ಗರ್ಭಗೃಹದ ಗೋಡೆಗಳು ಬಹು ದಪ್ಪವಾಗಿವೆ. ಬಸದಿಯ ಹೊರ ರಚನೆ ಆಯತಾ-ಕಾರವಾಗಿದ್ದು ಮುಂಭಾಗದಲ್ಲಿ ಮುಖ ಮಂಟಪವಿದೆ. ಇಡೀ ಬಸದಿ ಗಟ್ಟಿಗಲ್ಲಿನಿಂದ ನಿರ್ಮಾಣವಾಗಿದೆ.

ಬಸದಿಯ ಗರ್ಭಗೃಹದ ಮೇಲೆ ದ್ವಿತಳದಲ್ಲಿ ಮತ್ತೊಂದು ಗರ್ಭಗೃಹ ಮತ್ತು ಅಂತರಾಳವಿದ್ದು ಎರಡನೆಯ ಹಂತ (ತಳ)ವನ್ನು ಬಸದಿಯನ್ನಾಗಿ ಮಾರ್ಪಡಿಸಿರುತ್ತಾರೆ. ಕೂಟ, ಶಾಲಾ, ಪಂಜರದ ಕೆಳಗೆ ಜಿನ ಬಿಂಬಗಳು, ಶ್ರಾವಕರು, ಪ್ರಾಣಿಗಳನ್ನು ಬಿಡಿಸಿದೆ. ಗರ್ಭಗೃಹದಲ್ಲಿ ಭ. ಶ್ರೀ ಪಾಶ್ರ್ವನಾಥರ ಬಿಂಬವಿದೆ. ಇದನ್ನ ಜಿನದೇವಣ್ಣ ಮಾಡಿಸಿದಂತೆ ಹೇಳಿಕೊಂಡಿದ್ದಾನೆ. ಅಂತರಾಳವು ತೆರೆದ ಮಂಟಪವಾಗಿದ್ದು ತಳಗಡೆಯ ಅಂತರಾಳದ ನೇರಕ್ಕೆ ಎರಡು ಕಂಬಗಳಿದ್ದು ಅವು ಬ್ರಹ್ಮಕಾಂತಮಾದರಿಯವಾಗಿವೆ. ಮೂರನೆಯ ತಳವು ಚೌಕಾಕಾರವಾಗಿದ್ದು ಬ್ರಹ್ಮಕಾಂತ ಉಬ್ಬುಕಂಬಗಳಿಂದ ಆಲಂಕೃತವಾಗಿದೆ. ಮೇಲೆ ಎಂಟು ಮುಖದ ಶಿಖರ ಬಂದಿದೆ. ಶಿಖರದ ಮೇಲೆ ಪದ್ಮದಳಗಳ ಅಲಂಕಾರವಿದ್ದು ಅದರ ಮೇಲೆ ವೃತ್ತಾಕಾರದ ಕಳಸ ಬಂದಿದೆ. ಬಸದಿಯ ಆಗ್ನೇಯದಲ್ಲಿ ಮೇಲ್ಗಡೆಗೆ ಹೋಗಲು ಮೆಟ್ಟಿಲುಗಳಿದ್ದು ಮೆಟ್ಟಿಲುಗಳ ಪ್ರಾರಂಭದಲ್ಲಿ ಅರ್ಧ ವೃತ್ತಾಕಾರದ ಚಂದ್ರ ಶಿಲೆ ಇದೆ.

About

About Shri Neminatha Basadi (Chavundaraya Basadi)

Year of establishment
Late Ganga period
Established by
Associated with Chavundaraya and later Hoysala-period image makers
Main deity
Neminatha and Parshvanatha
Timings
Usually open from 8:00 AM to 6:00 PM
Location
Open map
The Basadi of Neminatha Tirthankara, also known as Chavundaraya Basadi, is one of South India’s important and beautiful monuments in the Dravidian style. Inscriptions on both sides of the front foundation state, ‘Chavundaraya caused this to be made.’ Since their lettering belongs to the eleventh century, Chavundaraya may have died before the building was completed and the Basadi may later have been named for him. Jinadevanna claimed to have built a Basadi praised by all the people of Belagola. Echanna, son of Gangaraja, stated that he constructed a Jain shrine called Trailokyaranjana. The images of Neminatha and the Yaksha and Yakshi belong to the Hoysala period. An inscription says that the Neminatha image was made by Gangachari, son of Hoysalachari, who bore the titles Vardhamanachari, Biruda Ruvari, and Mukhatilaka. This beautiful Dravidian building belongs to the late Ganga period, and Ganga general Chavundaraya was its patron. It contains a sanctum, open vestibule, navaranga, and entrance hall; the walls of the sanctum and vestibule are exceptionally thick. The exterior is rectangular, with an entrance hall at the front, and the entire Basadi is built of hard stone.

Above the sanctum is a second-storey sanctum and vestibule, the second level having been converted into a Basadi. Below the kuta, shala, and panjara elements are carvings of Jina images, lay devotees, and animals. The sanctum contains an image of Parshvanatha, which Jinadevanna claimed to have commissioned. The vestibule is an open hall with two Brahmakanta-type pillars aligned above the vestibule below. The third level is square and ornamented with engaged Brahmakanta pillars. Above it rises an eight-sided tower decorated with lotus petals and crowned by a circular finial. Steps at the southeast lead upward, and a semicircular moonstone marks their foot.