Basadi 15 | Chandragiri

Chandraprabha Basadi

ಚಂದ್ರಪ್ರಭ ಬಸದಿ

ಈ ಬಸದಿಯು ಗಂಗರ ಕಾಲದ ಅನೇಕ ಲಕ್ಷಣಗಳನ್ನು ಒಳಗೊಂಡಿರುವುದರಿಂದ ಬಸದಿಯ ಕಾಲವನ್ನು ಎಂಟನೆಯ ಶತಮಾನವೆಂದು ಅಂದಾಜಿಸಬಹುದು. ಗರ್ಭಗೃಹದಲ್ಲಿನ ಭ. ಶ್ರೀ ಚಂದ್ರಪ್ರಭ ಬಿಂಬ ಪೀಠದಲ್ಲಿ ವಕ್ರಗಚ್ಛದ ಬಸದಿ ಎಂದು ಉಲ್ಲೇಖಿತ ಶಾಸನವಿದೆ. ಬಸದಿಯ ಒಳ ರಚನೆಯು ಗರ್ಭಗೃಹ, ಅಂತರಾಳ, ನವರಂಗಮಂಟಪ ಮತ್ತು ಮುಖಮಂಟಪವನ್ನು ಒಳಗೊಂಡಿದೆ. ಬಸದಿಯ ನಿರ್ಮಾಣಕ್ಕೆ ಗ್ರಾನೈಟ್ ಗಟ್ಟಿಕಲ್ಲುಗಳನ್ನು ಬಳಸಲಾಗಿದ್ದು, ನಿರ್ಮಾಣದ ನಂತರ ಹಲವು ಬದಲಾವಣೆಗಳಿಗೆ ಒಳಪಟ್ಟಿದೆ. ಬಸದಿಯ ಪ್ರಾಚೀನ ಲಕ್ಷಣಗಳು ಉಳಿದಿರುವುದು ನವರಂಗದ ಕಂಬಗಳಲ್ಲಿ. ಈ ಬಸದಿಯ ಬೋದಿಗೆ ಗಂಗರ ಕಾಲದ ಸರಳ ಬೋದಿಗೆಯಾಗಿದೆ. ನವರಂಗದ ಮಧ್ಯೆ ಮುಚ್ಚಿಗೆಯಲ್ಲಿ ವೃತ್ತಾಕಾರದ ಅಷ್ಟದಳದ ಪದ್ಮವಿದೆ. ಈ ಬಸದಿಯಲ್ಲಿನ ಶಿಲ್ಪಗಳಲ್ಲಿ ಬಹುಮುಖ್ಯವಾದವು ನವರಂಗದಲ್ಲಿರುವ ಅಂಬಿಕಾ ಯಕ್ಷಿ ಹಾಗೂ ಸರ್ವಾಹ್ಣಯಕ್ಷರ ಬಿಂಬಗಳು; ಇಬ್ಬರೂ ಸಿಂಹಗಳ ಮೇಲೆ ಕುಳಿತಿದ್ದಾರೆ. ಯಕ್ಷ-ಯಕ್ಷಿಯರ ಬಿಂಬಗಳಲ್ಲಿ ಆಭರಣಗಳ ಹೆಚ್ಚಿನ ಅಲಂಕಾರವಿದೆ. ಬಲಗಾಲು ಕೆಳಕ್ಕೆ ಇಳಿಬಿಟ್ಟು ಎಡಗಾಲು ಮಡಚಿ ಕುಳಿತಿರುವ ಯಕ್ಷಿಯ ಸೀರೆಯ ನೆರಿಗೆ ಕಲಾತ್ಮಕವಾಗಿ ಕೆತ್ತಲ್ಪಟ್ಟಿದೆ. ಬಲಗೈನಲ್ಲಿ ನೀಲೋತ್ಪಲದ ಗೊಂಚಲು, ಎಡಗೈಲಿ ಫಲವಿದೆ. ವೈಭವನ್ನು ಸಾರುವಂತೆ ವಿಸ್ಮಯ ಹಸ್ತವನ್ನು ಹೊಂದಿದ್ದಾರೆ. ಪದ್ಮಾಸನದಲ್ಲಿ ಕುಳಿತಿರುವ ಯಕ್ಷನ ಶಿಲ್ಪವೂ ಅಲಂಕಾರದಿಂದ ಕೂಡಿದೆ.

About

About Chandraprabha Basadi

Year of establishment
To be confirmed
Established by
To be confirmed
Main deity
Lord Chandraprabha
Timings
Usually open from 8:00 AM to 6:00 PM
Location
Open map

Because this Basadi displays many Ganga-period features, it may be dated to the eighth century. An inscription on the pedestal of the Chandraprabha image in the sanctum calls it the Basadi of the Vakragachchha. The interior contains a sanctum, vestibule, navaranga hall, and entrance hall. Built of hard granite, it underwent many later changes. Its ancient features survive chiefly in the navaranga pillars, whose simple brackets are characteristic of the Ganga period. At the centre of the navaranga ceiling is a circular eight-petalled lotus. The most important sculptures here are Ambika Yakshi and Sarvahna Yaksha in the navaranga, both seated on lions and richly ornamented. The Yakshi sits with her right leg lowered and left leg folded; the pleats of her sari are artistically carved. She holds a cluster of blue lotuses in her right hand and a fruit in her left, with a gesture expressing splendour. The sculpture of the Yaksha seated in padmasana is likewise richly ornamented.