Basadi 14 | Chandragiri

Suparshvanatha Basadi

ಸುಪಾಶ್ರ್ವನಾಥ ಬಸದಿ

ಭ. ಶ್ರೀ ಸುಪಾಶ್ರ್ವನಾಥ ಬಸದಿಯ ಬಳಿ ದೊರೆತಿರುವ ಶಾಸನ ಲಿಪಿಗಳ ಆಧಾರದ ಮೇಲೆ ಈ ಬಸದಿಯ ನಿರ್ಮಾಣ ಕ್ರಿ.ಶ. 10ನೆಯ ಶತಮಾನದಲ್ಲಿ ಆಗಿದೆ ಎಂದು ತಿಳಿದು ಬರುತ್ತದೆ. ಇದರ ಗೋಡೆಗಳು ಇಟ್ಟಿಗೆ ಗಾರೆಯದಾಗಿದ್ದು ಸಾಕಷ್ಟು ಬದಲಾವಣೆಗೆ ಒಳಪಟ್ಟ ಬಸದಿಗಳಲ್ಲಿ ಇದೂ ಒಂದು. ಬಸದಿಯು ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪವನ್ನು ಒಳಗೊಂಡಿದೆ. ಗರ್ಭಗೃಹದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಭ. ಶ್ರೀ ಸುಪಾಶ್ರ್ವನಾಥರ ಜಿನಬಿಂಬವು ಶಾಂತ ಭಾವದಿಂದ ಕೂಡಿದೆ. ಸರ್ಪದ ಇಕ್ಕೆಲಗಳಲ್ಲಿ ಚಾಮರಧಾರಿಯರು ನಿಂತಿದ್ದು, ಒಂದು ಕೈಯಲ್ಲಿ ಚಾಮರವನ್ನೂ, ಮತ್ತೊಂದು ಕೈಯಲ್ಲಿ ಕಟೀಹಸ್ತವನ್ನುಳ್ಳವರಾಗಿದ್ದಾರೆ. ಚಾಮರಧಾರಿಯರ ವಸ್ತ್ರಾಲಂಕಾರವು 10 ನೆಯ ಶತಮಾನದ ಗಂಗರ ಕಾಲದ ಶಿಲ್ಪಗಳನ್ನು ಹೋಲುತ್ತವೆ.ಈ ಬಿಂಬದ ಸಿಂಹಪೀಠ ಗಮನಾರ್ಹವಾಗಿದ್ದು, ಪಲ್ಲವರ ದೇವಾಲಯಗಳಲ್ಲಿ ಕಾಣುವ ಸಿಂಹವನ್ನು ಹೋಲುತ್ತವೆ. ತೀರ್ಥಂಕರರ ಒರಗು ಪೀಠವು ಕಲಾತ್ಮಕವಾಗಿದ್ದು, ಹಾವಿನ ಶರೀರದ ಇಕ್ಕೆಲಗಳಲ್ಲಿ ನಿಂತ ಸಿಂಹದ ಅಲಂಕಾರವಿದೆ. ಇದರ ಮೇಲಿನ ಪಟ್ಟಿಕೆಯಲ್ಲಿ ವ್ಯಾಳೆಗಳ ತಲೆಯನ್ನು ಕಲಾತ್ಮಕವಾಗಿ ಬಿಡಿಸಿದೆ. ಮುಖಮಂಟಪದ ಕಂಬಗಳು ಕುಳ್ಳಗಿದ್ದೂ ಗಂಗರ ಕಾಲದ ಕಂಬಗಳನ್ನು ಹೋಲುತ್ತವೆ. ಬಾಗಿಲವಾಡವು ಹೊಯ್ಸಳರ ಕಾಲದ್ದಾಗಿದ್ದು ಸುಂದರವಾಗಿದೆ. ಇವೆಲ್ಲವೂ ಈ ಬಸದಿಯಲ್ಲಿರುವ ಪ್ರಾಚೀನ ಕುರುಹುಗಳಾಗಿವೆ. ಗಂಗ, ಪಲ್ಲವ, ಹೊಯ್ಸಳ ಮಿಶ್ರಿತ ವಾಸ್ತುಶಿಲ್ಪವನ್ನು ನೋಡಿದರೆ ಈ ಬಸದಿಯು ಕಾಲಕಾಲಕ್ಕೆ ಐದಾರು ಬಾರಿಯಾದರೂ ಜೀರ್ಣೋದ್ಧಾರಗೊಂಡಿದೆ ಎಂದು ತಿಳಿದುಬರುತ್ತದೆ.

About

About Suparshvanatha Basadi

Year of establishment
10th century AD
Established by
To be confirmed from inscriptions near the Basadi
Main deity
Lord Suparshvanatha
Timings
Usually open from 8:00 AM to 6:00 PM
Location
Open map

Inscriptions found near Lord Suparshvanatha Basadi indicate that it was built in the tenth century AD. Its walls are of brick and mortar, and it is one of the Basadis that has undergone extensive alteration. It contains a sanctum, vestibule, and entrance hall. In the sanctum, the seated image of Lord Suparshvanatha in padmasana has a serene expression. Fly-whisk bearers stand on either side of the serpent, each holding a fly-whisk in one hand and resting the other at the waist. Their dress and ornaments resemble Ganga-period sculpture of the tenth century. The lion-throne is noteworthy and resembles lions seen in Pallava temples. The Tirthankara’s backrest is artistic, with standing lions ornamenting both sides of the serpent’s body; the band above carries stylized vyala heads. The short pillars of the entrance hall resemble Ganga-period pillars, while the beautiful doorway belongs to the Hoysala period. These are all traces of the Basadi’s antiquity. Its mixture of Ganga, Pallava, and Hoysala architecture shows that it was restored at least five or six times over the centuries.