Basadi 13 | Chandragiri

Shantinatha Basadi

ಶಾಂತಿನಾಥ ಬಸದಿ

ಚಂದ್ರಗಿರಿ ಪ್ರವೇಶಿಸಿದೊಡನೆ ಮೊಟ್ಟ ಮೊದಲು ಸಿಗುವ ಬಸದಿಯೇ ಭ. ಶ್ರೀ ಶಾಂತಿನಾಥ ಬಸದಿ. ಮಹಾನವಮಿ ದಿಬ್ಬದ ನೈರುತ್ಯಕ್ಕೆ ಇರುವ ಈ ಬಸದಿಯಲ್ಲಿ ಭ. ಶ್ರೀ ಶಾಂತಿನಾಥ ತೀರ್ಥಂಕರರ 12.10 ಅಡಿ ಎತ್ತರದ ಕಾಯೋತ್ಸರ್ಗದ ಸುಂದರ ಬಿಂಬದ ಕೆತ್ತನೆಯಿದೆ. ಈ ಬಸದಿ ಪೂರ್ಣವಾಗಿ ಜೀರ್ಣೋದ್ಧಾ -ರವಾಗಿರುವುದರಿಂದ ಇದರ ಕಾಲವನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ತೀರ್ಥಂಕರರ ಮೂರ್ತಿಯಲ್ಲಿ ಹೊಯ್ಸಳರ ಕಾಲದ ಹೋಲಿಕೆ ಇರುವುದರಿಂದ ಬಸದಿಯು ಸುಮಾರು 11 ಅಥವಾ 12ನೆಯ ಶತಮಾನಕ್ಕೆ ಸೇರಿದುದಾಗಿದೆ. ಅಧಿಷ್ಠಾನದಲ್ಲಿ ಉಪಪೀಠ, ಕಪೋತಗಳನ್ನು ಗುರುತಿಸಬಹುದಾಗಿದೆ. ಸಂಪೂರ್ಣ ಶಿಲಾಮಯ ಬಸದಿಯಾಗಿದ್ದು, ವಿಜಯನಗರೋತ್ತರ ಕಾಲಕ್ಕೆ ಸೇರಿದ ಎತ್ತರವಾದ ಪದ್ಮಕಾಂತ ಕಂಬಗಳನ್ನು ಮುಖ ಮಂಟಪದಲ್ಲಿ ಬಳಸಿದೆ. ಕಂಬಗಳ ಮೇಲೆ ಸೀಳು ಬೋದಿಗೆಯನ್ನು ಹೊಂದಿದ್ದು ಇದರ ರಚನೆಗೆ ಗಟ್ಟಿಕಲ್ಲನ್ನು ಬಳಸಿದೆ. ಗರ್ಭಗೃಹ ಅಷ್ಟೇ ಅಗಲದ ಅಂತರಾಳ ಮತ್ತು ಮುಖ ಮಂಟಪವನ್ನು ಹೊಂದಿದೆ. ಮೈಸೂರು ಅರಸರ ಆಳ್ವಿಕೆ ಕಾಲದಲ್ಲಿ ಇದು ಜೀರ್ಣೋದ್ದಾರಗೊಂಡಿದೆ.

About

About Shantinatha Basadi

Year of establishment
Image may belong to the 11th or 12th century
Established by
To be confirmed; restored during the Mysore period
Main deity
Lord Shantinatha
Timings
Usually open from 8:00 AM to 6:00 PM
Location
Open map

This is the first Basadi encountered on entering Chandragiri, southwest of the Mahanavami platform. It contains a 12-foot-10-inch image of Shantinatha in kayotsarga posture. The building has been completely restored and its exact date is uncertain, though the image resembles Hoysala work and may belong to the eleventh or twelfth century. The base has upapitha and kapota mouldings. Built entirely of stone, the entrance hall has tall post-Vijayanagara padmakanta pillars with split brackets, all made of hard stone. The Basadi comprises a sanctum, an equally broad vestibule, and an entrance hall. It was restored during the period of the Mysore rulers.