Basadi 12 | Town / Matha precinct

Siddhanta Basadi

ಸಿದ್ಧಾಂತ ಬಸದಿ

ಚಂದ್ರಗಿರಿಯ ಪೂರ್ವ ಬುಡದಲ್ಲಿ ಹಾಗೂ ಅಕ್ಕನ ಬಸದಿಯ ಹಿಂಭಾಗದಲ್ಲಿ ಸಿದ್ಧಾಂತ ಬಸದಿ ಇದೆ. ಹಿಂದಿನ ಕಾಲದಲ್ಲಿ ಸಿದ್ಧಾಂತ ಗ್ರಂಥಗಳನ್ನು ಈ ಬಸದಿಯಲ್ಲಿ ಸಂರಕ್ಷಿಸಿ ಇಡಲಾಗುತ್ತಿತ್ತು. ಆದ್ದರಿಂದಲೇ ಈ ಬಸದಿಯು ಸಿದ್ಧಾಂತ ಬಸದಿಯೆಂದು ಹೆಸರಾಗಿದೆ. ಆಚಾರ್ಯ ಶುಭಚಂದ್ರ ದೇವರು ಈ ಬಸದಿಯಲ್ಲಿದ್ದ ಷಟ್ಖಂಡಾಗಮದ ಟೀಕಾ ಗ್ರಂಥಗಳಾದ ಧವಲಾ, ಜಯಧವಲಾ, ಮಹಾಧವಲಾ ಪ್ರಾಚೀನ ಓಲೆಗರಿ ಗ್ರಂಥಗಳನ್ನು ಸಂರಕ್ಷಣೆಯ ಉದ್ದೇಶಕ್ಕಾಗಿ ಮೂಡಬಿದಿರೆಗೆ ಕೊಂಡೊಯ್ದಿದ್ದರು. ಈ ಬಸದಿಯಲ್ಲಿ 24 ತೀರ್ಥಂಕರರ ಶಿಲಾಮೂರ್ತಿಯಿದ್ದು, ಅದರ ಮದ್ಯದಲ್ಲಿ ಸುಮಾರು ಎರಡು ಅಡಿಯ ಭ. ಶ್ರೀ 1008 ಪಾಶ್ರ್ವನಾಥರ ಮೂರ್ತಿಯಿದೆ. ಇಲ್ಲಿನ ಶಿಲಾಲೇಖ ಸಂಖ್ಯೆ-417(332)ರಂತೆ ಚತುರ್ವಿಂಶತಿ ತೀರ್ಥಂಕರರ ಮೂರ್ತಿಯನ್ನು ಕ್ರಿ.ಶ. ಸುಮಾರು 1620 ರಲ್ಲಿ ಉತ್ತರ ಭಾರತದ ಒಬ್ಬ ಯಾತ್ರಿಕರು ಪ್ರತಿಷ್ಠಾಪಿಸಿದರೆಂದು ಉಲ್ಲೇಖಿಸುತ್ತದೆ.

About

About Siddhanta Basadi

Year of establishment
Around AD 1620
Established by
A pilgrim from North India installed the images
Main deity
Twenty-four Tirthankaras with Parshvanatha at the centre
Timings
Usually open from 8:00 AM to 6:00 PM
Location
Open map

Siddhanta Basadi stands behind Akkana Basadi at the eastern foot of Chandragiri. It received its name because works on Jain doctrine were stored here. Acharya Shubhachandra took the ancient palm-leaf manuscripts of the Dhavala, Jayadhavala, and Mahadhavala commentaries on the Shatkhandagama from here to Moodabidri for safekeeping. The Basadi contains twenty-four stone Tirthankara images, with an approximately two-foot image of Parshvanatha at the centre. Inscription 417 (332) records that a pilgrim from North India installed them around AD 1620.