Basadi 11 | Town / Matha precinct

Danashala Basadi

ದಾನಶಾಲಾ ಬಸದಿ

ಈ ಹಿಂದೆ ಮಠವಾಗಿದ್ದ ಈ ಸ್ಥಳದಲ್ಲಿ ದಾನ ನೀಡುತ್ತಿದ್ದರಿಂದ ಈ ಬಸದಿಗೆ ದಾನಶಾಲಾ ಬಸದಿ ಎಂಬ ಹೆಸರು ಬಂದಿದೆ. ಈ ಬಸದಿಯು ಉದ್ದವಾಗಿದ್ದು, ಕಡಿಮೆ ಅಗಲವನ್ನು ಒಳಗೊಂಡಿರುವ ಆಯತಾಕಾರದ ಕಟ್ಟಡ. ಇದು ಹೊಯ್ಸಳರ ಕಾಲದಲ್ಲಿ ಜೀರ್ಣೋದ್ದಾರವಾಗಿದೆ. ಇದರಲ್ಲಿ 10 ಕಂಬಗಳಿದ್ದು ಹೊರಗಡೆಯಲ್ಲಿ ನಾಲ್ಕು ಕಂಬಗಳಿವೆ. ಇದಕ್ಕೆ ಮಧ್ಯೆ ಗೋಡೆಯೊಂದನ್ನು ಹಾಕಿ ಗರ್ಭಗೃಹವನ್ನು ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಪಂಚ ಪರಮೇಷ್ಠಿಗಳ ಮೂರ್ತಿ ಇದೆ. ಗರ್ಭಗೃಹಕ್ಕೆ ಬಳಸಿರುವ ಬಾಗಿಲವಾಡ ಸು. ನಾಲ್ಕು ಅಡಿ ಎತ್ತರವಾಗಿದ್ದು, ವಲ್ಲಿ ಶಾಖೆಯನ್ನು ಪ್ರಧಾನವಾಗಿ ಹೊಂದಿದೆ. ಹೊರಗಡೆಯ ಇಳಿಜಾರು ಕಟ್ಟಡಕ್ಕೆ ಬಳಸಿರುವ ಕಂಬಗಳು ಸು. 11-12ನೆಯ ಶತಮಾನಕ್ಕೆ ಸೇರಿದವುಗಳು. ಒಳ ಕಂಬಗಳು ಚತುರಸ್ರ-ಅಷ್ಟಾಸ್ರವಾಗಿವೆ. ಕೆಲವು ಕಂಬಗಳು ಚೌಕ, ವೃತ್ತಾಕಾರವಾಗಿವೆ. ಈ ಬಸದಿಯ ಮುಚ್ಚಿಗೆಯಲ್ಲಿ ಬಣ್ಣದ ರೇಖಾ ಚಿತ್ರಗಳ ವಿನ್ಯಾಸ ಮಸುಕು ಮಸುಕಾಗಿ ಕಾಣಬರುತ್ತದೆ. ಮೈಸೂರಿನ ಚಿಕ್ಕದೇವರಾಜ ಒಡೆಯರ್‍ರವರು ತಮ್ಮ ಹಿಂದಿನ ಅರಸರಾದ ದೊಡ್ಡದೇವರಾಜ ಒಡೆಯರ್‍ರವರ ಸಮಯದಲ್ಲಿ ಬೆಳಗೊಳದ ಯಾತ್ರೆಯನ್ನು ಕೈಗೊಂಡು, ದಾನಶಾಲಾ ಬಸದಿಯ ದರ್ಶನವನ್ನು ಮಾಡಿ ಈ ಬಸದಿಯ ಪೂಜಾ ವ್ಯವಸ್ಥೆಗಾಗಿ ಮದನೇವು ಗ್ರಾಮವನ್ನು ದಾನವಾಗಿ ಬಿಟ್ಟಿದ್ದರು ಎಂಬುದಾಗಿ ಚಿದಾನಂದ ಕವಿಯ ಮುನಿವಂಶಾಭ್ಯುದಯ (ಕ್ರಿ.ಶ.1602) ಕೃತಿಯಿಂದ ತಿಳಿದು ಬರುತ್ತದೆ.

About

About Danashala Basadi

Year of establishment
Hoysala-period restoration; earlier monastery
Established by
To be confirmed; restored during Hoysala period and endowed by Chikkadevaraja Wodeyar
Main deity
Panchaparameshthis
Timings
Usually open from 8:00 AM to 6:00 PM
Location
Open map

This was formerly a monastery. Because charity was distributed here, it came to be known as Danashala Basadi. The long, narrow, rectangular building was restored in the Hoysala period. It has ten interior pillars and four exterior pillars. A partition wall creates the sanctum, which contains three-foot images of the Panchaparameshthis. The doorway is about four feet high and is ornamented mainly with a creeper band. The pillars of the outer sloping structure date to the eleventh or twelfth century. Inside, the pillars are square or octagonal, with some combining square and round sections. Faded painted linear designs remain on the ceiling. Chidananda Kavi’s Munivamshabhyudaya, composed in AD 1602, records that during the time of Dodda Devaraja Wodeyar, Mysore ruler Chikkadevaraja Wodeyar made a pilgrimage to Belagola, visited this Basadi, and endowed the village of Madanevu for its worship.