Basadi 10 | Town / Matha precinct

Lord Shri Adinatha Basadi (Nagara Jinalaya)

ಭ. ಶ್ರೀ ಆದಿನಾಥ ಬಸದಿ (ನಗರ ಜಿನಾಲಯ)

ಇಮ್ಮಡಿ ಬಲ್ಲಾಳನ ಕಾಲದಲ್ಲಿ ನಯಕೀರ್ತಿ ಸಿದ್ಧಾಂತ ಚಕ್ರವರ್ತಿಗಳ ಶಿಷ್ಯ ಹಾಗೂ ಪಟ್ಟಣ ಸ್ವಾಮಿಯಾಗಿದ್ದ ನಾಗದೇವ ಮಂತ್ರಿ ಈ ಬಸದಿಯನ್ನು 1195ರಲ್ಲಿ ಕಟ್ಟಿಸಿದ್ದಾರೆ. ಬೆಳಗೊಳದ ನಖರರು ಅಂದರೆ ವ್ಯಾಪಾರಿಗಳ ಆಡಳಿತದಲ್ಲಿದ್ದ ಬಸದಿ ಇದಾದ್ದರಿಂದ ಈ ಬಸದಿಗೆ ನಖರ ಜಿನಾಲಯವೆಂದು ಹೆಸರು ಬಂತು. ಕಾಲಾಂತರದಲ್ಲಿ ನಖರ ಬಸದಿ ‘ನಗರ ಜಿನಾಲಯ’ವೆಂದು ಹೆಸರಾಯಿತು. ಈ ಬಸದಿಯಲ್ಲಿನ ಬೋದಿಗೆಗಳು ಸೀಳುಬೋದಿಗೆಗಳಾಗಿವೆ. ಇದು ಮೂಲತ: ಪುಟ್ಟ ಬಸದಿಯಾಗಿದ್ದು ಹಲವು ಬಾರಿ ಜೀರ್ಣೋದ್ಧಾರಗೊಂಡಿದೆ. ಶಿಖರವೂ ಸಹ ಅನಂತರದ ಸೇರ್ಪಡೆಯಾಗಿದೆ. ಈ ಬಸದಿಯಲ್ಲಿ ಗರ್ಭಗೃಹ, ಸುಕನಾಸಿ, ನವರಂಗ ಹಾಗೂ ಮುಖ ಮಂಟಪಗಳಿವೆ.

ಇದರ ಕಂಬಗಳು ತಳಭಾಗ ಚೌಕಾಕಾರವಾಗಿದ್ದು ಅನಂತರ ವೃತ್ತಾಕಾರಕ್ಕೆ ತಿರುಗಿ ಮಧ್ಯೆ ಪಟ್ಟಿಕೆ ಬಂದಿದೆ. ಇದರ ಮೇಲಿನ ಭಾಗ ಸ್ವಲ್ಪ ನೀಳವಾಗಿದ್ದು ಇದರ ಮೇಲೆ ಕುಂಭ ಬಂದಿದೆ. ಮುಚ್ಚಿಗೆಯಲ್ಲಿ ಉಬ್ಬಿದ ಪದ್ಮಾಲಂಕಾರವಿದೆ. ದ್ವಾರಬಂಧದಲ್ಲಿ ಸ್ತಂಭ ಶಾಖೆ ಮಾತ್ರವಿದ್ದು ಮೇಲೆ ಲಲಾಟದಲ್ಲಿ ಎರಡು ಕಮಲದ ಮೊಗ್ಗುಗಳು ಇಳಿಬಿದ್ದಿವೆ. ಲಲಾಟ ಬಿಂಬವಿಲ್ಲ. ಇದರ ಅಧಿಷ್ಠಾನವು ಜಗತಿ, ಉಪಾನ, ತ್ರಿಪಟ್ಟ ಕುಮುದಗಳ ಕಪೋತದಿಂದ ಕೂಡಿದ್ದು ಹೊಯ್ಸಳ ಮಾದರಿಯಲ್ಲಿದೆ. ಬಸದಿಯಲ್ಲಿ ಬ್ರಹ್ಮನ ಶಿಲ್ಪವಿದ್ದು ಚಾವಟಿ ಮತ್ತು ಫಲ ಹಿಡಿದಿದೆ.

About

About Lord Shri Adinatha Basadi (Nagara Jinalaya)

Year of establishment
AD 1195
Established by
Nagadeva, minister and head of the town
Main deity
Lord Adinatha
Timings
Usually open from 8:00 AM to 6:00 PM
Location
Open map

Nagadeva, a minister and head of the town, was a disciple of Nayakirti during the reign of Ballala II. He built this Basadi in AD 1195. Because it was administered by the nakharas, or merchant guilds, it was called Nakhara Jinalaya and later Nagara Jinalaya. The building has split brackets. Originally small, it underwent repeated restorations and later acquired a tower. It contains a sanctum, sukhanasi, navaranga, and entrance hall.

The pillars are square at the base and circular above, with a band, an elongated upper section, and a pot-shaped capital. A relief lotus ornaments the ceiling. The doorway has only pillar mouldings, with two pendant lotus buds and no image on the lintel. The Hoysala-style base comprises jagati, upana, tripatta-kumuda, and kapota mouldings. A sculpture of Brahma holds a whip and a fruit.