Basadi 09 | Town / Matha precinct

Tribhuvana Chudamani Basadi (Mangayi Basadi)

ತ್ರಿಭುವನ ಚೂಡಾಮಣಿ ಬಸದಿ (ಮಂಗಾಯಿ ಬಸದಿ)

ಶ್ರವಣಬೆಳಗೊಳದ ಚಾರುಕೀರ್ತಿ ಪಂಡಿತಾಚಾರ್ಯರ ಶಿಷ್ಯೆಯಾಗಿದ್ದ ರಾಜ ಆಸ್ಥಾನದ ರಾಜ ನರ್ತಕಿ ಮಂಗಾಯಿ ಎಂಬುವರು ಕ್ರಿ.ಶ. 1353ರಲ್ಲಿ ಈ ಬಸದಿಯನ್ನು ಕಟ್ಟಿಸುತ್ತಾರೆ. ಹಾಗಾಗಿ ಈ ಬಸದಿಗೆ ಮಂಗಾಯಿ ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯನ್ನು ‘ತ್ರಿಭುವನ ಚೂಡಾಮಣಿ’ ಎಂದೂ ವರ್ಣಿಸಲಾಗಿದೆ. ಗಟ್ಟಿಗಲ್ಲಿನಲ್ಲಿ ನಿರ್ಮಿಸಿರುವ ಈ ಬಸದಿಯು ಲಕ್ಷಣಗಳಲ್ಲಿ, ಸರಳತೆಯ ಶೈಲಿಯಲ್ಲಿ ಒದೆಗಲ್ ಬಸದಿಯಂತಿದೆ. ಬಸದಿಯ ಪ್ರವೇಶದಲ್ಲಿ ಮೆಟ್ಟಿಲುಗಳ ಎರಡು ಬದಿಗಳಲ್ಲಿ ಸೊಗಸಾದ ಸಾಲಂಕೃತ ಒಂದೊಂದು ಆನೆಯ ದುಂಡು ಶಿಲ್ಪವಿದೆ. ದಪ್ಪ ಕಂಬಗಳನ್ನು ಬಳಸಿ ವಿಶಾಲವಾದ ನವರಂಗವನ್ನು ರಚಿಸಲಾಗಿದೆ. ಹೊಯ್ಸಳರ ಕಾಲದ ದ್ವಾರಪಾಲಕ ಶಿಲ್ಪ ಮುಂತಾದುವು ಬಹು ಸುಂದರವಾಗಿವೆ. ಗರ್ಭಗೃಹದಲ್ಲಿರುವ ಭ. ಶ್ರೀ 1008 ಶಾಂತಿನಾಥರ ಮೂರ್ತಿಯನ್ನು ವಿಜಯನಗರ ಅರಸ ಇಮ್ಮಡಿ ದೇವರಾಯನ ಮಹಾರಾಣಿ ಭೀಮಾದೇವಿಯೂ, ಭ. ಶ್ರೀ 1008 ವರ್ಧಮಾನ ಮಹಾವೀರರ ಮೂರ್ತಿಯನ್ನು 12ನೆಯ ಶತಮಾನದಲ್ಲಿ ಬಸತಾಯಿಯೂ, ಭ. ಶ್ರೀ 1008 ಅನಂತನಾಥರ ಬಿಂಬವನ್ನು ಶ್ರೀಕರಣದ ಬವಚಯ ಮಾಡಿಸಿದ್ದಾರೆ. ಈ ಜಿನಬಿಂಬಗಳು ಹಾಗೂ ಅವುಗಳ ಸುತ್ತಲ ಪ್ರಭಾವಳಿ ಬಹುಸುಂದರವಾಗಿವೆ. ಕಾಲಾ ನಂತರ ಈ ಬಸದಿಯನ್ನು ಗೇರುಸೊಪ್ಪೆಯ ಗುಂಮಟಣ್ಣ ಜೀರ್ಣೋದ್ಧಾರ ಮಾಡಿಸಿದ್ದಾರೆ. ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರು ಕಳೆದ ವರ್ಷ ಈ ಬಸದಿಯ ಹೊರಪ್ರಾಂಗಣವನ್ನು ಜೀರ್ಣೋದ್ಧಾರ ಮಾಡಿಸಿರುತ್ತಾರೆ.

About

About Tribhuvana Chudamani Basadi (Mangayi Basadi)

Year of establishment
AD 1353
Established by
Mangayi, royal dancer and disciple of Charukirti Panditacharya
Main deity
Bhagavan Shantinatha, Mahavira, and Anantanatha
Timings
Usually open from 8:00 AM to 6:00 PM
Location
Open map

Mangayi, a royal dancer and disciple of Charukirti Panditacharya, built this Basadi in AD 1353 and named it Tribhuvana Chudamani. Constructed of hard stone, it resembles Odegal Basadi. Elephants flank the entrance, while the navaranga contains massive pillars and the doorway has Hoysala-style guardians. The image of Shantinatha was commissioned by Queen Bhimadevi during the reign of Devaraya II. The Mahavira image was installed by Basatayi in the twelfth century, and the Anantanatha image by Bavachaya of the royal secretariat. Gummatanna of Gerusoppe later restored the Basadi. Last year, Jagadguru Swasti Shri Abhinava Charukirti Panditacharyavarya Mahaswamiji restored the outer courtyard.