Basadi 07 | Town / Matha precinct

The Mathada Basadi

ಶ್ರೀಮಠದ ಬಸದಿ

ಸುಮಾರು 15ನೇ ಶತಮಾನದಲ್ಲಿ ನಿರ್ಮಿತವಾಗಿರಬಹುದಾದ ಶ್ರೀಮಠದ ಬಸದಿಯಲ್ಲಿ ಮೂಲ- ನಾಯಕ ಭ. ಶ್ರೀ 1008 ಚಂದ್ರಪ್ರಭ ತೀರ್ಥಂಕರರು ಹಾಗೂ ಭ. ಶ್ರೀ 1008 ನೇಮಿನಾಥ ತೀರ್ಥಂಕರರು, ಸಮವಸರಣ ಜಿನಬಿಂಬ, ಸಹಸ್ರಕೂಟ ಜಿನಬಿಂಬ ಮುಂತಾದ ಅನೇಕ ಪ್ರಾಚೀನ ದಾತುಗಳ ಹಾಗೂ ಶಿಲೆಗಳ ನೂರಾರು ಸುಂದರ ಜಿನಬಿಂಬಗಳಿವೆ. ಕ್ಷೇತ್ರದ ಅಧಿದೇವತೆ ಮಾತೆ ಕೂಷ್ಮಾಂಡಿನಿ ದೇವಿ, ಜ್ವಾಲಾಮಾಲಿನಿ ಅಮ್ಮನವರು ವಿರಾಜಮಾನ-ರಾಗಿದ್ದಾರೆ. ಈ ಬಸದಿಯಲ್ಲಿ ಇರುವ ಶಿಲಾಲೇಖಗಳು ಶ್ರೀಮಠದ ಪೀಠಾಧಿಪತಿಗಳಾದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರಿಗಾಗಿಯೇ ನಿರ್ಮಿತವಾಗಿರುವ ಬಗ್ಗೆ ಉಲ್ಲೇಖ ನೀಡುತ್ತವೆ. ಬಸದಿಯಲ್ಲಿ ಗುರುಪೀಠ ಸಿಂಹಾಸನವಿದ್ದು, ಶ್ರೀಮಠಕ್ಕೆ ನೂತನ ಪೀಠಾಧಿಪತಿಗಳು ಆಯ್ಕೆಯಾದ ನಂತರ ಇದೇ ಬಸದಿಯಲ್ಲಿ ಪಟ್ಟಾಭಿಷೇಕ ಕಾರ್ಯ ನಡೆಯುತ್ತದೆ. ಅಂತೆಯೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವೂ ಇಲ್ಲಿಯೇ ನಡೆಯುತ್ತದೆ. ಗೋಡೆಗಳ ಮೇಲೆ ನೈಸರ್ಗಿಕ ವರ್ಣಗಳಿಂದ ರಚಿತವಾಗಿರುವ ವಿಶೇಷ ಚಿತ್ರಗಳಿಂದ ಈ ಬಸದಿ ಗಮನ ಸೆಳೆಯುತ್ತದೆ. ಮಠದ ಬಸದಿಯ ಪ್ರಾಂಗಣದ ಒಳಗೋಡೆಗಳಲ್ಲಿ ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಸು. 17ನೇ ಶತಮಾನದಲ್ಲಿ ಈ ವರ್ಣಚಿತ್ರಗಳನ್ನು ರಚಿಸಿದ್ದು, ಇವು ಇಂದಿಗೂ ಸುರಕ್ಷಿತವಾಗಿ ಉಳಿದು ಬಂದಿರುವುದು ಒಂದು ವಿಶೇಷ. ಪ್ರವೇಶ ದ್ವಾರದ ಎಡಬಾಗದಲ್ಲಿ ಪಾಶ್ರ್ವನಾಥರ ಹಿಂದಿನ 9 ಭವಾವಳಿಗಳು ಹಾಗೂ ಭ. ಶ್ರೀ ಪಾಶ್ರ್ವನಾಥರ ಪಂಚಕಲ್ಯಾಣ ದೃಶ್ಯಗಳು ಹಾಗೂ ಸಮವಸರಣವು ಅತ್ಯಂತ ಮನೋಹರವಾಗಿ ಚಿತ್ರಿತವಾಗಿವೆ. ಪ್ರವೇಶದ್ವಾರದ ಬಲ ಭಾಗದಲ್ಲಿ ಶ್ರೀಕ್ಷೇತ್ರದಲ್ಲಿ ನಡೆದು ಬಂದಿರುವ ಭ. ಶ್ರೀ ನೇಮಿನಾಥ ತೀರ್ಥಂಕರರ ರಥೋತ್ಸವದ ಚಿತ್ರಗಳು ಬಹು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ರಥವನ್ನು ಎಳೆಯುತ್ತಿರುವ ಚಿತ್ರ, ಅಂದಿನ ಭಟ್ಟಾರಕ ಸ್ವಾಮಿಗಳು, ವಿವಿಧ ಬಗೆಯ ಧ್ವಜಗಳು-ಛತ್ರಿ-ತೋರಣ-ಚಾಮರ, ವ್ಯಾಪಾರಿಗಳು, ನೃತ್ಯಗಾರರು, ಸಾರ್ವಜನಿಕರುಗಳ ಚಿತ್ರಗಳಿವೆ. ಮುಂದುವರೆದು ನಾಗಕುಮಾರ ಚರಿತೆ, ಷಡ್‍ಲೇಶ್ಯಗಳ ಚಿತ್ರಗಳು, ಚೋವಿಸ ತೀರ್ಥಂಕರರು, ಪಂಚಕುಲದೇವತೆಗಳ ಚಿತ್ರಗಳಿವೆ. ಪರಮಪೂಜ್ಯ ನೂತನ ಶ್ರೀಗಳವರು ಈ ಚಿತ್ರಗಳನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿರುತ್ತಾರೆ. ಪ್ರಾಂಗಣದ ತೊಟ್ಟಿಯಂಗಳದ ಮೇಲಿನ ಗೂಡುಗಳಲ್ಲಿ ಸರಸ್ವತಿ, ಕೂಷ್ಮಾಂಡಿನಿ, ಪದ್ಮಾವತಿ, ಚಕ್ರೇಶ್ವರಿ, ಜ್ವಾಲಾಮಾಲಿನಿ, ಸರ್ವಾಹ್ಣಯಕ್ಷ, ಬ್ರಹ್ಮಯಕ್ಷ, ಸೌಧಮೇಂದ್ರ ಮೊದಲಾದ ದೇವತೆಗಳ ಕಲಾತ್ಮಕವಾದ ಮೂರ್ತಿಗಳು ಸುಣ್ಣ-ಮರಳು ಗಾರೆಯಿಂದ ನಿರ್ಮಿತವಾಗಿವೆ. ಕಟ್ಟಡದ ಮೇಲುಪ್ಪರಿಗೆಯಲ್ಲಿ ಸು. 1930ರ ದಶಕದಲ್ಲಿ ನಿರ್ಮಿಸಿರುವ ಬಸದಿಯಲ್ಲಿ ಭ. ಶ್ರೀ 1008 ಪಾಶ್ರ್ವನಾಥ ತೀರ್ಥಂಕರರ ಜಿನಬಿಂಬವಿದೆ.

About

About The Mathada Basadi

Year of establishment
Probably around the 15th century; upper Basadi around the 1930s
Established by
Built for Charukirti Panditacharyavarya Mahaswamiji, pontiff of the monastery
Main deity
Lord Chandraprabha, Lord Neminatha, Kushmandini, Jwalamalini, and other Jina images
Timings
Usually open from 8:00 AM to 6:00 PM
Location
Open mapSearch link - exact pin to be verified

The Mathada Basadi, probably built around the fifteenth century, contains the principal deity Lord Shri 1008 Chandraprabha Tirthankara, Lord Shri 1008 Neminatha Tirthankara, a Samavasarana Jina image, a Sahasrakuta Jina image, and hundreds of beautiful ancient Jina images made of metal and stone. Mother Kushmandini, the presiding deity of the sacred site, and Mother Jwalamalini are also enshrined here. Inscriptions in the Basadi indicate that it was constructed especially for Charukirti Panditacharyavarya Mahaswamiji, the pontiff of the monastery. The Basadi contains the guru-seat and throne; after a new pontiff is selected, the consecration ceremony is performed here, as is the annual anniversary of that ceremony. The Basadi is notable for distinctive murals painted with natural pigments. These paintings, made on the inner walls of its courtyard during the reign of Mysore’s Krishnaraja Wodeyar III, around the seventeenth century, have remarkably survived to the present. To the left of the entrance are beautifully painted scenes of Parshvanatha’s nine previous births, the five auspicious events in his life, and the Samavasarana. To the right are vivid scenes of the Neminatha Tirthankara chariot festival traditionally held at Shravanabelagola: people pulling the chariot, the Bhattaraka of the time, various flags, parasols, festoons and fly-whisks, merchants, dancers, and the public. These are followed by scenes from the Nagakumara Charita, depictions of the six leshyas, the twenty-four Tirthankaras, and the five tutelary deities. The present revered pontiff has initiated restoration of these paintings. In niches above the courtyard are artistic lime-and-sand stucco images of Saraswati, Kushmandini, Padmavati, Chakreshwari, Jwalamalini, Sarvahna Yaksha, Brahma Yaksha, Saudharmendra, and other deities. On the upper floor is a Basadi built around the 1930s, containing an image of Lord Shri 1008 Parshvanatha Tirthankara.