Basadi 06 | Town / Matha precinct

Bhandari Basadi (Bhavya Chudamani Jina Temple)

ಚತುವಿರ್ಂಶತಿ ತೀಥರ್ಂಕರರ ಬಸದಿ/ಭಂಡಾರಿ ಬಸದಿ (ಭವ್ಯ ಚೂಡಾಮಣಿ ಜಿನಮಂದಿರ)

ಶ್ರೀ ಮಠದ ಎದುರಿನಲ್ಲಿ ಉತ್ತರಕ್ಕೆ ಮುಖ ಮಾಡಿ ನಿಂತಿರುವ ಚತುರ್ವಿಂಶತಿ ತೀರ್ಥಂಕರರ ಬಸದಿ (ಭಂಡಾರಿ ಬಸದಿ)ಯು ಬೆಳಗೊಳದ ಬಸದಿಗಳಲ್ಲೆಲ್ಲಾ ಹಿರಿದಾದ ಬಸದಿಯಾಗಿದೆ. ಹೊಯ್ಸಳ ಅರಸ ಒಂದನೆಯ ನರಸಿಂಹನ ಭಂಡಾರಿಯಾಗಿದ್ದ ಹುಳ್ಳನೆಂಬುವವರು ಕ್ರಿ.ಶ. 1159ರಲ್ಲಿ ಈ ಬಸದಿಯನ್ನು ಕಟ್ಟಿಸಿದರೆಂದು ಶಾಸನ ತಿಳಿಸುತ್ತದೆ. ಹೀಗಾಗಿ ಇದು ಭಂಡಾರಿ ಬಸದಿ ಎಂದು ರೂಢಿಗೆ ಬಂದಿದೆ. ಹೊಯ್ಸಳರ ಅರಸ ನರಸಿಂಹ ಈ ಜಿನಾಲಯವನ್ನು ‘ಭವ್ಯ ಚೂಡಾಮಣಿ’ ಎಂದು ಕರೆದರೆ, ‘ಗೊಮ್ಮಟ ಪುರದ ಭೂಷಣ’ ಎಂದು ಶಾಸನಮೊಂದರಲ್ಲಿ ಉಲ್ಲೇಖಿಸಲಾಗಿದೆ.ಬಸದಿಯು ಬೇರೆ ಬೇರೆ ಕಾಲದಲ್ಲಿ ವಿಸ್ತ್ರತಗೊಂಡಿರುವುದರಿಂದ ಬೇರೆ ಬೇರೆ ರೀತಿಯ ವಾಸ್ತು ರಚನೆಗಳನ್ನು ಇದು ಒಳಗೊಂಡಿದೆ. ಬೃಹತ್ 200 ಕಲ್ಲು ಕಂಬಗಳಿಂದ ನಿರ್ಮಾಣ ಗೊಂಡಿರುವ 3 ಅಂಕಣದ ವಿಶಾಲ ಬಸದಿ ಮತ್ತು ಸುತ್ತಲಿನ ಬೃಹತ್ ಕಲ್ಲಿನ ರಕ್ಷಣಾ ಗೋಡೆ ಗಮನ ಸೆಳೆಯುತ್ತದೆ. ಆಯತಾಕಾರವಾಗಿ ಉದ್ದಕ್ಕೆ ಇರುವ ಈ ಬಸದಿಯನ್ನು ಮೂರು ಭಾಗವಾಗಿ ವಿಂಗಡಿಸಿದ್ದು, ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪ ಹಾಗೂ ಪ್ರಾಕಾರ ಹೊಂದಿದೆ. ಗರ್ಭಗೃಹದಲ್ಲಿ ಗೋಡೆಗೆ ಸೇರಿಸಿರುವ ಕಂಬಗಳನ್ನು ಬಿಟ್ಟು 12 ಕಂಬಗಳಿವೆ. ಗೋಡೆಗೆ ಸೇರಿದಂತೆ 48 ಅಡಿ ಉದ್ದದ ಅಲಂಕೃತಗೊಂಡ ಹರಿ ಪೀಠದ ಮೇಲೆ ಸುಂದರವಾದ 24 ತೀರ್ಥಂಕರರ ಬಿಂಬಗಳಿವೆ. ಪೀಠದಲ್ಲಿ ಲಾಂಛನವನ್ನು ಬಿಡಿಸಲಾಗಿದ್ದು, ಪ್ರಭಾವಳಿಗಳಲ್ಲಿ ಸುರಳಿ ಸುರಳಿಯಾಗಿ ತೋರಣಗಳು ಬಂದಿವೆ. ಪ್ರತಿ ಜಿನಬಿಂಬದ ಅಕ್ಕಪಕ್ಕದಲ್ಲಿ ಆಯಾಯ ತೀರ್ಥಂಕರರ ಯಕ್ಷ, ಯಕ್ಷಿಯರನ್ನು ಕೆತ್ತಲಾಗಿದೆ.

ಗರ್ಭಗೃಹಕ್ಕೆ ಎರಡು ಬಾಗಿಲುಗಳಿದ್ದು ಅವುಗಳಲ್ಲಿ ಒಂದು ನವರಂಗಕ್ಕೂ ಬಲಕ್ಕಿರುವ ಇನ್ನೊಂದು ಹೊರಗಡೆಗೂ ಮುಖಮಾಡಿದೆ. ಈ ಬಾಗಿಲುಗಳು ಹೊಯ್ಸಳರ ಕಾಲದವಾಗಿದ್ದು ಬಳಪದಕಲ್ಲನ್ನು ಬಳಸಲಾಗಿದೆ. ವಿಶಾಲವಾದ ನವರಂಗದಲ್ಲಿ ಗರ್ಭಗೃಹದ ಗೋಡೆಗೂ ನವರಂಗಕ್ಕೂ ಮಧ್ಯೆ ನಾಲ್ಕು ಕೋಣೆಗಳಿದ್ದು ಬಸದಿಯ ಎಡಕ್ಕೆ ಮಾತೆ ಪದ್ಮಾವತಿ, ಬಲಕ್ಕೆ ಬ್ರಹ್ಮದೇವರ ವಿಗ್ರಹಗಳಿವೆ. ನವರಂಗದ ಬಾಗಿಲು ಬಹು ಸುಂದರವಾಗಿದ್ದು ಹೊಯ್ಸಳರ ಕಾಲದ ಸುಂದರ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಮಧ್ಯದ ದ್ವಾರದ ಬಾಗಿಲಿನ ಮೇಲೆ ಎರಡೂ ಬದಿಯಲ್ಲಿ ನರ್ತನ ಮಾಡುತ್ತಿರುವ ಸೌಧಮೇರ್ಂದ್ರನ ಅಪರೂಪದ ಉಬ್ಬು ಶಿಲ್ಪವಿದೆ. ತೋರಣದ ಪಾಶ್ರ್ವಗಳಲ್ಲಿ ಗಂಧರ್ವ ದಂಪತಿಗಳಿದ್ದಾರೆ. ಕೆಳಭಾಗದಲ್ಲಿ ವೀರರು, ನರ್ತಕರು, ನರ್ತಕಿಯರು, ಮುನಿಗಳು, ಗಂಧರ್ವರು, ಶ್ರಾವಕರ ಉಬ್ಬು ಶಿಲ್ಪಗಳಿವೆ. ನವರಂಗವು 36 ಕಂಬಗಳಿಂದ ಕೂಡಿದ್ದು ವಿಶಾಲವಾದುದಾಗಿದೆ. ಇದರ ಇಕ್ಕೆಲದ ಗೋಡೆಗಳಲ್ಲಿ ಎರಡು ಬಾಗಿಲುಗಳು ಅಲಂಕಾರದಲ್ಲಿ ಹೊಯ್ಸಳರ ಕಾಲದ ರಚನೆಯನ್ನು ಹೋಲುತ್ತವೆ.

ಸರಸ್ವತಿ ಮಂಟಪ, ಗೋಪುರ, ಪ್ರಾಕಾರ, ಮಾನಸ್ಥಂಬಗಳೆಲ್ಲ ವಿಜಯನಗರ ಕಾಲಕ್ಕೆ ಸೇರಿದೆ. ತೆರೆದ ವಿಶಾಲವಾದ ಮಂಟಪದ ಕಂಬಗಳಲ್ಲಿ ಅನೇಕ ಸುಂದರ ಉಬ್ಬು ಶಿಲ್ಪಗಳಿದ್ದು, ಸರಸ್ವತಿ ಬಿಂಬವಿರುವ ಕಂಬದಲ್ಲಿನ ಶಾಸನವು ಚಂಗಾಳ್ವ ನಂಜುಂಡ ಒಡೆಯನ ಮಹಾಪ್ರಧಾನ ಬುಕ್ಕರಾಯನ ಮಗ ಹಾಗೂ ಜೈನಕವಿಯೂ ಆದ ದೇವಪ್ಪಗಳು ಈ ಸರಸ್ವತಿ ಮಂಟಪವನ್ನು ಜೀರ್ಣೋದ್ಧಾರ ಮಾಡಿಸಿದಂತೆ ತಿಳಿಸುತ್ತದೆ. ಈ ಮಂಟಪವನ್ನು ಪ್ರವಚನಕ್ಕಾಗಿ ಬಳಸುತ್ತಿದ್ದುದರಿಂದ ‘ಸರಸ್ವತಿಮಂಟಪ' ಎಂಬುದು ಅನ್ವರ್ಥವಾಗಿದೆ. ಬಸದಿಯ ಸುತ್ತಲೂ ಕಟಾಂಜನವಿದ್ದು ಈ ಕಟಾಂಜನಕ್ಕೆ ದೊಡ್ಡ ದೊಡ್ಡ ಕಂಬಗಳನ್ನು ಬಳಸಿ ಮೇಲೆ ಚಪ್ಪಡಿಗಳನ್ನು ಹಾಸಿರುತ್ತದೆ. ವಿಜಯನಗರದ ಆರಂಭ ಕಾಲದ ಬುಕ್ಕರಾಯನ ಶಾಸನವಿರುವುದು ಈ ಬಸದಿಯಲ್ಲಿಯೇ. ಹೀಗಾಗಿ ಧಾರ್ಮಿಕ ಚಟುವಟಿಕೆಯ ಕೇಂದ್ರವೂ ಇದಾಗಿದ್ದಿರಬಹುದು. ಭಂಡಾರ ಬಸದಿಯಲ್ಲಿ ಕ್ರಿ.ಶ.1368ರಲ್ಲಿ ಕೆತ್ತಿಸಿದ ವೀರ ಬುಕ್ಕರಾಯನ ಶಾಸನ, ಕ್ರಿ.ಶ.1159ರ ಭಂಡಾರಿ ಹುಳ್ಳನ ಶಾಸನ, ಕ್ರಿ.ಶ.1165ರ ಸವಣೇರಿಯ ದಾನ ಶಾಸನ, ಕ್ರಿ.ಶ.1278ರ ದೇವರ ವಲ್ಲಭ ದೇವರ ಕಂದಾಯ ಶಾಸನ, 1159ರ ಹುಲ್ಲಪ್ಪನ ದತ್ತಿ ಶಾಸನ ಸೇರಿದಂತೆ ಒಟ್ಟು 5 ಶಾಸನಗಳಿವೆ. ವಾರ್ಷಿಕ ಜಾತ್ರಾ ಮಹೋತ್ಸವದಂದು ಭ. ಶ್ರೀ 1008 ನೇಮಿನಾಥ ತೀರ್ಥಂಕರರ ಹಾಗೂ ಕ್ಷೇತ್ರದ ಅಧಿದೇವತೆ ಕೂಷ್ಮಾಂಡಿನಿಯ ದೇವಿಯ ಮಹಾರಥವು ಈ ಬಸದಿಯ ಸುತ್ತಲೂ ಪ್ರದಕ್ಷಿಣೆ ಬರುತ್ತದೆ.

About

About Bhandari Basadi (Bhavya Chudamani Jina Temple)

Year of establishment
AD 1159
Established by
Hulla, treasurer of Hoysala king Narasimha I
Main deity
Twenty-four Tirthankaras
Timings
Usually open from 8:00 AM to 6:00 PM
Location
Open map

Facing north opposite the monastery, the Chaturvimshati Tirthankara Basadi (Bhandari Basadi) is the largest of all the Basadis at Belagola. An inscription states that Hulla, the treasurer of Hoysala king Narasimha I, built it in AD 1159; hence it came to be known as Bhandari Basadi. King Narasimha called this Jinalaya ‘Bhavya Chudamani,’ while another inscription describes it as the ‘Ornament of Gommatapura.’ Since the Basadi was enlarged at different times, it incorporates several architectural styles. Its spacious three-bay hall, built with 200 massive stone pillars, and the great protective stone wall around it are striking. The long rectangular building is divided into three parts and contains a sanctum, sukhanasi, navaranga, entrance hall, and enclosure. Apart from the engaged pillars along the walls, the sanctum has twelve pillars. On an ornate 48-foot-long pedestal adjoining the wall are beautiful images of the twenty-four Tirthankaras. Their emblems are carved on the pedestal, and the aureoles carry scrolling ornamental arches. Beside every Jina image are the corresponding Yaksha and Yakshi.

The sanctum has two doors: one opens into the navaranga and the other, on the right, opens outside. These Hoysala-period doorways are made of soapstone. In the spacious navaranga, four rooms lie between the sanctum wall and the hall; an image of Mother Padmavati is on the left and Brahmadeva on the right. The exceptionally beautiful navaranga doorway testifies to Hoysala artistry. Above the central opening are rare reliefs of Saudharmendra dancing on both sides. Gandharva couples appear beside the ornamental arch, while the lower part bears reliefs of warriors, male and female dancers, monks, Gandharvas, and lay devotees. The spacious navaranga contains thirty-six pillars. Two doorways in its side walls resemble Hoysala-period work in their ornamentation.

The Saraswati Mantapa, tower, enclosure, and manastambhas belong to the Vijayanagara period. The pillars of the large open hall bear many fine reliefs. An inscription on the pillar carrying the Saraswati image records that Devappa—a Jain poet and the son of Bukkaraya, chief minister of Changaluva Nanjunda Odeya—restored this Saraswati Mantapa. Because the hall was used for discourses, the name ‘Saraswati Mantapa’ is appropriate. A pillared cloister surrounds the Basadi, built with massive pillars and roofed with stone slabs. An early Vijayanagara inscription of Bukkaraya is found here, suggesting that the Basadi may also have been a centre of religious activity. Five inscriptions are preserved in Bhandari Basadi: the inscription of Vira Bukkaraya dated AD 1368, Bhandari Hulla’s inscription of AD 1159, the Savaneri grant of AD 1165, Devara Vallabha Deva’s revenue inscription of AD 1278, and Hullappa’s endowment inscription of 1159. During the annual festival, the great chariot of Lord Shri 1008 Neminatha Tirthankara and the sacred site’s presiding deity, Goddess Kushmandini, circumambulates this Basadi.