Basadi 05 | Vindhyagiri

Suttalaya (Enclosure)

ಸುತ್ತಾಲಯ

ಚಾವುಂಡರಾಯನು ಗೊಮ್ಮಟ ವಿಗ್ರಹವನ್ನು ಮಾಡಿದ ಮೇಲೆ ಕೆಲವು ಕಾಲ ಅದು ತೆರೆದ ಬಯಲಿನಲ್ಲಿತ್ತು. ಗೊಮ್ಮಟನ ಹಿಂಬದಿಯಲ್ಲಿ ಮಾತ್ರ ಚಾಮುಂಡರಾಯ ಭಾರಿ ಗಾತ್ರದ ಕಂಬಗಳನ್ನು ಬಳಸಿ ಮಂಟಪವನ್ನು ರಚಿಸಿದ್ದರು. ಹೀಗಾಗಿ ಗೊಮ್ಮಟನ ಹಿಂಬದಿಯಲ್ಲಿ ಇದ್ದ ಮಂಟಪವನ್ನು ಸೇರಿಸಿಕೊಂಡು ಉಳಿದ ಮೂರು ಕಡೆಯ ಸುತ್ತಾಲಯವನ್ನು ಹೊಯ್ಸಳ ಸೇನಾನಿ ಗಂಗರಾಜ ಮಾಡಿಸಿದ. ಈ ಸುತ್ತಾಲಯದಲ್ಲಿನ 24 ತೀರ್ಥಂಕರ ಶಿಲ್ಪಗಳನ್ನು ಮತ್ತು ಇತರೆ ಯಕ್ಷ-ಯಕ್ಷಿ ಶಿಲ್ಪಗಳನ್ನು ನಯಕೀರ್ತಿ ಸಿದ್ಧಾಂತ ಚಕ್ರವರ್ತಿಗಳ ಶಿಷ್ಯ ಮೊಸಳೆಯ ಬಸವಿಸೆಟ್ಟಿ ಮಾಡಿಸಿದಂತೆ ತಿಳಿಯುತ್ತದೆ. ಸುತ್ತಾಲಯದ ಭಿತ್ತಿಯನ್ನು ಈ ಬಸವಿಸೆಟ್ಟಿ ಮಾಡಿಸಿದರು. ಸುತ್ತಾಲಯದಲ್ಲಿನ ಜಿನಬಿಂಬಗಳಲ್ಲಿ ಕೆಲವು ಗಂಗ ಅರಸರ ಕಾಲಕ್ಕೆ ಸೇರುವವಾಗಿವೆ. ಬಸವಿಸೆಟ್ಟಿಯ ಮಕ್ಕಳಾದ ನಂಬಿದೇವಸೆಟ್ಟಿ, ಬೋಕಿಸೆಟ್ಟಿ, ಜಿನ್ನಿಸೆಟ್ಟಿ, ಬಾಹುಬಲಿ ಸೆಟ್ಟಿಯರು ತೀರ್ಥಂಕರರ ಮುಂದಿನ ಜಾಲಂಧರವನ್ನು ಮಾಡಿಸುತ್ತಾರೆ.

ಗೊಮ್ಮಟೇಶ್ವರನ ಮುಂಬದಿಯಲ್ಲಿನ ಮಂಟಪದಲ್ಲಿ ಅಷ್ಟದಿಕ್ಷಾಲಕರ ಮಧ್ಯೆ ಇಂದ್ರನ ಶಿಲ್ಪವಿದ್ದು ಈ ಶಿಲ್ಪವನ್ನು ವೃತ್ತಾಕಾರದ ಆವರಣದಲ್ಲಿ ಬಿಡಿಸಿದೆ. ಇದಕ್ಕೆ ಚೌಕಾಕಾರದ ಚೌಕಟ್ಟು ಇದ್ದು, ಆ ಚೌಕಟ್ಟಿನ ಅಂಚುಗಳಲ್ಲಿ ಅಷ್ಟ ದಿಕ್ಷಾಲಕರನ್ನು ಚಿಕ್ಕದಾಗಿ ಬಿಡಿಸಿದೆ. ಉಳಿದ ಭಾಗವು ಕುಸುರಿ ಕೆಲಸದಿಂದ ತುಂಬಿದೆ. ಇಂದ್ರನ ಶಿಲ್ಪವಿರುವ ಭಾಗದಲ್ಲಿಯೇ ವಾದ್ಯಗಾರರು ಮತ್ತು ನರ್ತಕರನ್ನು ಬಿಡಿಸಲಾಗಿದೆ. ಇಂದ್ರನು ತನ್ನ ಕೈಯಲ್ಲಿ ಕಳಶವಿಡಿದಿರುತ್ತಾನೆ. ಈ ಶಿಲ್ಪವನ್ನು ಹೊಯ್ಸಳ ಶಿಲ್ಪಿಗಳು ಚಪ್ಪಡಿಗಲ್ಲಿನಲ್ಲಿ ಬಿಡಿಸಿರುವುದು ಒಂದು ಸವಾಲೇ ಸರಿ. ಈ ಮಂಟಪವನ್ನು 12ನೆಯ ಶತಮಾನದ ಪ್ರಾರಂಭದಲ್ಲಿ ಬಲದೇವನೆಂಬ ಹೊಯ್ಸಳ ಮಂತ್ರಿ ಕಟ್ಟಿಸಿದ. ಸುತ್ತಾಲಯದ ಹೊರ ಭಾಗವನ್ನು ಸು. 15-16ನೆಯ ಶತಮಾನದಲ್ಲಿ ಕಟ್ಟಲಾಗಿದೆ, ಸುತ್ತಾಲಯದ ಮುಂಭಾಗವು ಅನೇಕ ಬದಲಾವಣೆಗಳಿಗೊಳಪಟ್ಟಿರುವುದರಿಂದ ಇದರ ಮೂಲ ರೂಪ ಹೇಗಿತ್ತೆಂಬ ಬಗ್ಗೆ ತಿಳಿಯುವುದಿಲ್ಲ. ಸುತ್ತಾಲಯದ ಪ್ರವೇಶದ ಎರಡೂ ಕಡೆ ಎರಡು ಶಾಸನಗಳಿದ್ದು ಅವುಗಳಲ್ಲಿ ಒಂದು ಶಾಸನದಲ್ಲಿ ಬೊಪ್ಪಣ ಕವಿ ರಚಿಸಿದ ಗೊಮ್ಮಟಸ್ತುತಿ ಇದೆ. ಗೊಮ್ಮಟನನ್ನು ಹೊಗಳಿರುವ ಈ ಶಾಸನವು ಬಹು ಸುಂದರವಾದ ಕಾವ್ಯ ಗೊಮ್ಮಟನ ಉದಾತ್ತ ವ್ಯಕ್ತಿತ್ವವನ್ನು ಕುರಿತು ಕವಿ ಭಾವುಕನಾಗಿ ಹಾಡಿದ್ದಾರೆ.

About

About Suttalaya (Enclosure)

Year of establishment
Early 12th century enclosure; later additions around 15th-16th centuries
Established by
Ganga/Hoysala patrons including Gangaraja and Basavisetti of Mosale
Main deity
Lord Gommateshwara Bahubali enclosure and 24 Tirthankara images
Timings
Usually open from 8:00 AM to 6:00 PM
Location
Open map

For some time after Chavundaraya created the Gommata image, it stood in the open. He had constructed a hall with massive pillars only behind the image. Incorporating this rear hall, the Hoysala commander Gangaraja built the enclosure on the other three sides. The 24 Tirthankara sculptures and other Yaksha and Yakshi images in the enclosure appear to have been commissioned by Basavisetti of Mosale, a disciple of Nayakirti Siddhanta Chakravarti. Basavisetti also built its wall. Some of the Jina images date to the Ganga period. His sons, Nambidevasetti, Bokisetti, Jinnisetti, and Bahubali Setti, commissioned the screens in front of the Tirthankaras.

In the pavilion before Gomateshwara is a sculpture of Indra surrounded by the eight guardians of the directions. The central relief is enclosed within a circle and framed by a square, with smaller figures of the eight directional guardians carved along its edges. The remaining surface is filled with intricate ornament. Musicians and dancers appear in the same panel, and Indra holds a ceremonial vessel. Carving this composition in a stone slab was a remarkable achievement of the Hoysala sculptors. The pavilion was built in the early 12th century by a Hoysala minister named Baladeva. The outer portion of the enclosure was constructed around the 15th-16th centuries. Because the front has undergone many alterations, its original form is uncertain. Two inscriptions flank the entrance; one contains the Gommatastuti composed by the poet Boppana, a fine poem emotionally praising Gommata's noble character.