Basadi 04 | Vindhyagiri

Tyagada Brahmadeva Pillar

ತ್ಯಾಗದ ಬ್ರಹ್ಮದೇವರ ಸ್ತಂಭ

ಒದೆಗಲ್ ಬಸದಿಯ ಪಶ್ಚಿಮಕ್ಕೆ ಅಖಂಡ ಬಾಗಿಲ ಮುಂದೆ ಇಳಿಜಾರಿನಲ್ಲಿ ಎರಡಂತಸ್ತಿನ ಸು. 10ನೆಯ ಶತಮಾನದ ತ್ಯಾಗದ ಬ್ರಹ್ಮದೇವರ ಸ್ತಂಭವಿದೆ. ಇದು ಗಂಗವಾಡಿಯ ಅಂತಿಮ ಕಾಲದ ಕಲಾಕೃತಿ. ಐತಿಹಾಸಿಕ ದೃಷ್ಟಿಯಿಂದ ಇದು ತುಂಬಾ ಮಹತ್ವದ್ದಾಗಿದೆ. ಹಳೆಯಬೆಳಗೊಳದ ಬಸದಿಯ ಅಧಿಷ್ಠಾನದ ಮಾದರಿಯನ್ನು ಹೋಲುವ ಬಹು ಸುಂದರವಾದ ಪೀಠವನ್ನು ಹೊಂದಿದೆ. ಪೀಠವು ಸಿಂಹ, ಆನೆಗಳಿಂದ ಅಲಂಕೃತವಾಗಿದೆ. ಪೀಠದ ಮೇಲೆ ಚೌಕಾಕಾರದ ತಳಹದಿ ಬಂದಿದ್ದು ಅದರ ಪೂರ್ವಮುಖದಲ್ಲಿ ಚಾವುಂಡರಾಯನು ತನ್ನ ಗುರುವಿನ ಬಳಿ ಕುಳಿತಿರುವಂತಹ ಶಿಲ್ಪವಿದೆ. ಶಿಲ್ಪದಲ್ಲಿ ಬಲ ತೋಳನ್ನು ಎತ್ತಿ ಎಡ ತೋಳನ್ನು ಮಾಡಿ ಕುಳಿತಿರುವ ಚಾಮುಂಡರಾಯನ ಎಡ ತೋಳನ್ನು ದಂಡಹಸ್ತ ಎರಡೂ ಕಡೆ ಚಾಮರ ಧಾರಿಯರಿದ್ದಾರೆ. ಚಾವುಂಡರಾಯನ ಮುಂದೆ ಆಚಾರ್ಯಶ್ರೀ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳು ಕುಳಿತು ಉಪದೇಶ ನೀಡುತ್ತಿದ್ದಾರೆ. ಈ ಕಂಬದ ಉತ್ತರ ಮುಖದ ಸು. 983ರ ಪೂರ್ಮೋಕ್ತ ಶಾಸನದಲ್ಲಿ ಚಾವುಂಡರಾಯನ ಶೌರ್ಯಸಾಹಸಗಳನ್ನು, ದಿಗ್ವಿಜಯಗಳ ವರ್ಣನೆಯನ್ನು ಕೀರ್ತಿಸುವ 6 ಶಾರ್ದೂಲ ವಿಕ್ರೀಡಿತ ವೃತ್ತಗಳಿವೆ. ಇದರಲ್ಲಿ ಚಾವುಂಡರಾಯನ ಸಾಹಸ ಕೀರ್ತನೆ, ತನ್ನ ರಾಜನ ಪರವಾಗಿ ಶತ್ರು ರಾಜರ ಮೇಲೆ ಕೈಕೊಂಡ ಕದನಗಳಲ್ಲಿ ಸಂಪಾದಿಸಿದ ವಿಜಯಗಳು ಇಲ್ಲಿ ಕಾವ್ಯಮಯವಾಗಿ ವರ್ಣಿಸಲಾಗಿದೆ. ಮತ್ತೊಂದು ಬದಿ 12ನೆಯ ಶತಮಾನದಲ್ಲಿ ಕಂಬದ ಮೇಲೆ ಯಕ್ಷನ ಪ್ರತಿಮೆಯನ್ನು ಹೆಗಡೆ ಕಣ್ಣನೆಂಬುವವನು ಸ್ಥಾಪಿಸಿದ ಬಗ್ಗೆ ಶಾಸನವಿದೆ. ಚೌಕಾಕಾರದ ತಳಹದಿಯ ಮೇಲೆ ಸಿಲಿಂಡರ್ ಆಕಾರದ ಸ್ತಂಭದಲ್ಲಿ ಸುತ್ತಲೂ ಬಳ್ಳಿಗಳು ಬಹು ಅಲಂಕೃತವಾಗಿ ಮೂಡಿ ಬಂದಿದ್ದು ಸುರಳಿ-ಸುರಳಿಗಳಾಗಿ ಮೇಲಕ್ಕೆ ಹೋಗಿವೆ. ಇದರಲ್ಲಿನ ಬಳ್ಳಿಗಳು, ಎಲೆಗಳು, ಪುಷ್ಪಗಳು ಮುಂತಾದವನ್ನೂ ಅಲಂಕಾರಿಕವಾಗಿ ಬಿಡಿಸಿದೆ. ಸೂಕ್ತವಾಗಿ ಕೆತ್ತಲಾದ ಈ ಕಂಬವು ಕಲಾತ್ಮಕವೂ ಸುಂದರವೂ ಆಗಿದೆ. ಬಳ್ಳಿಗಳು ಮುಗಿದ ಮೇಲೆ ಕುಂಭ ಬಂದಿದ್ದು ಅದರ ಮೇಲೆ ಪದ್ಯಫಲಕ ಬಂದಿದೆ. ಚಾವುಂಡರಾಯ ಇದೇ ಸ್ಥಾನದಲ್ಲಿ ಕುಳಿತು ಬಾಹುಬಲಿ ಮೂರ್ತಿಯ ಕೆತ್ತನೆ ಕಾರ್ಯದಲ್ಲಿ ಸಹಾಯ ಮಾಡುವವರಿಗೆ ಅವರ ಪರಿಶ್ರಮಕ್ಕಾಗಿ ತನ್ನ ಸಂಪತ್ತನು ದಾನವಾಗಿ ಕೊಡುತ್ತಿದ್ದರೆಂದೂ ಹಾಗೂ ಬಡಯಾತ್ರಿಕರಿಗೆ ದಾನ ನೀಡುತ್ತಿದ್ದರೆಂದು. ತನ್ನ ಅಂತಿಮ ಕಾಲದಲ್ಲಿ ಸಲ್ಲೇಖನ ಸ್ವೀಕರಿಸಿ ಇಲ್ಲಿ ಸಮಾಧಿಮರಣ ಮೂಲಕ ದೇಹತ್ಯಾಗ ಮಾಡಿದ್ದರಿಂದ ಅವರ ಸ್ಮರಣಾರ್ಥವಾಗಿಯೇ ಈ ಸ್ತಂಭವನ್ನು ಪ್ರತಿಷ್ಠಾಪಿಸಲಾಗಿದೆಯೆಂದು, ಆದ್ದರಿಂದ ಈ ಸ್ತಂಭವನ್ನು ತ್ಯಾಗಸ್ತಂಭ ಎಂದು ಕರೆಯುವ ಪ್ರತೀತಿಯಿದೆ.

About

About Tyagada Brahmadeva Pillar

Year of establishment
About 10th century
Established by
Associated with Chavundaraya; Yaksha image later installed by Heggade Kanna
Main deity
Brahmadeva / Tyagastambha memorial pillar
Timings
Usually open from 8:00 AM to 6:00 PM
Location
Open map

West of Odegal Basadi, on the slope in front of Akhanda Bagilu, stands the two-storeyed Tyagada Brahmadeva pillar, dating to about the 10th century. It is an important work from the closing phase of Gangavadi. Its handsome pedestal resembles the adhisthana of the Basadi at Halebelagola and is decorated with lions and elephants. On the square base is an east-facing sculpture of Chavundaraya seated beside his teacher. Chavundaraya is shown seated with one arm raised; attendants bearing fly-whisks stand on either side. In front of him, Acharya Nemichandra Siddhanta Chakravarti sits and gives instruction. An inscription of about AD 983 on the northern face contains six verses in the Shardula Vikridita metre praising Chavundaraya's courage, conquests, and victories in battles fought on behalf of his king. Another inscription records that, in the 12th century, a person named Heggade Kanna installed a Yaksha image on the pillar. Above the square base rises a cylindrical shaft richly carved with curling vines, leaves, and flowers. The well-proportioned pillar is both artistic and graceful. A pot motif appears where the vines end, with an inscribed panel above it. Tradition says that Chavundaraya sat at this place and gave from his wealth to those assisting in carving the Bahubali image, rewarding their labour and supporting poor pilgrims. It is also believed that he later undertook sallekhana and died here through ritual fasting. The pillar was therefore installed in his memory and came to be called the Tyagastambha, or Pillar of Renunciation.