Basadi 02 | Vindhyagiri

Chandranatha Basadi

ಚಂದ್ರನಾಥ ಬಸದಿ

ಒದೆಗಲ್ ಬಸದಿಯ ಸಮೀಪದ ಎರಡು ದೊಣೆಗಳ ಮಧ್ಯೆ ಉತ್ತರಾಭಿಮುಖವಾಗಿ ಚಂದ್ರನಾಥ ಬಸದಿಯಿದೆ. ನರಸಿಂಹಪುರದ ಪುಟ್ಟಸೋಮಿಸೆಟ್ಟಿ ಮತ್ತು ದೇವೀರಮ್ಮನ ಮಕ್ಕಳಾದ ಚಿಕ್ಕಣ ಮತ್ತು ಚೆನ್ನಣ ಎಂಬುವವರು ಕ್ರಿ.ಶ. 1667ರಲ್ಲಿ ಈ ಬಸದಿಯನ್ನು ಮಾಡಿಸಿದ್ದಾರೆ.

ಇದು ಗರ್ಭಗೃಹ, ಮುಖಮಂಟಪ ಮತ್ತು ಸುತ್ತು ಮಂಟಪವನ್ನು ಒಳಗೊಂಡಿದೆ. ಗರ್ಭಗೃಹ ಮತ್ತು ಮುಖಮಂಟಪಗಳು ಸುತ್ತು ಮಂಟಪಕ್ಕಿಂತ ಎತ್ತರವಾಗಿವೆ. ಇದರ ಅಧಿಷ್ಠಾನವು ಜಗತಿ, ಪದ್ಯೋಪಾನ, ವಲ್ಲೀಪತ್ರ, ಕುಮುದ, ಕಂಪ, ಊಧ್ರ್ವ ಪದ್ಮವಾಜನ ಭಾಗಗಳನ್ನು ಹೊಂದಿದೆ. ಗರ್ಭಗೃಹದಲ್ಲಿನ ತೀಥರ್ಂಕರರ ಬಿಂಬವನ್ನು ಸು. 11ನೆಯ ಶತಮಾನದಲ್ಲಿ ಬಂಡೆಯಲ್ಲಿ ಕೆತ್ತಲಾಗಿದೆ. ಬಂಡೆಗಲ್ಲಿಗೆ ಹೊಂದಿಸಿ ಮುಂಬದಿಯಲ್ಲಿ ಗೋಡೆ ಕಟ್ಟಿ ಬಸದಿ ನಿರ್ಮಿಸಲಾಗಿದೆ.

ಬಸದಿಯ ಮುಂದಿನ ಮೂವತ್ತು ಅಡಿ ಎತ್ತರದ ಮಾನಸ್ತಂಭ ಹಾಗೂ 40x40 ಅಡಿ ಅಳತೆಯ ಕೊಳ (ದೊಣೆ) ನಿರ್ಮಿಸಿ ಬಸದಿಯ ನಿರ್ವಹಣೆಗೆ ಜಿನ್ನೇನಹಳ್ಳಿಯನ್ನು ದತ್ತಿಯಾಗಿ ಚನ್ನಣ್ಣ ನೀಡಿದ್ದರಿಂದ ಬಸದಿಯನ್ನು ಈತನ ಹೆಸರಿನಿಂದಲೇ ಕರೆಯಲಾಗುತ್ತಿದೆ.

ಬಸದಿಯು 24 ಕಂಬಗಳ ತೆರೆದ ಮಂಟಪವನ್ನು ಹೊಂದಿದೆ. ಗರ್ಭಗುಡಿಯ ದಕ್ಷಿಣ ಗೋಡೆಯಾಗಿರುವ ಬಂಡೆಗಲ್ಲಿನ ಮೇಲೆ ಕುಳಿತಿರುವ ಭ. ಶ್ರೀ ಚಂದ್ರನಾಥರ ಉಬ್ಬು ಚಿತ್ರವನ್ನು ದೊಡ್ಡ ಬಂಡೆಯ ಮೇಲೆ ಕೆತ್ತಲಾಗಿದ್ದು, ಗರ್ಭಗುಡಿಯನ್ನು ಒಂದು ಚಿಕ್ಕ ಶಿಖರ ಅಲಂಕರಿಸಿದೆ.

ಚಿಕ್ಕಣ್ಣ ಮತ್ತು ಚೆನ್ನಣ್ಣನ ಪೋಷಕರಾದ ಪುಟ್ಟಿಸಾಮಿ ಶೆಟ್ಟಿ ಮತ್ತು ದೇವಿರಮ್ಮ ಅವರನ್ನು ಪ್ರತಿನಿಧಿಸುವ ಒಂದು ಗಂಡು ಮತ್ತು ಇನ್ನೊಂದು ಹೆಣ್ಣು. ಪರಸ್ಪರ ಮುಖಾಮುಖಿಯಾಗಿ ಕೈಗಳನ್ನು ಜೋಡಿಸಿದ ಚಿತ್ರಣವನ್ನು ಬಂಡೆಯ ಮೇಲೆ ಕೆತ್ತಲಾಗಿದೆ.

About

About Chandranatha Basadi

Year of establishment
AD 1667
Established by
Chikkana and Chennana, children of Puttasomisetti and Deviramma of Narasimhapura
Main deity
Bhagavan Chandranatha
Timings
Usually open from 8:00 AM to 6:00 PM
Location
Open map

Chandranatha Basadi stands facing north between two ponds near Odegal Basadi. It was commissioned in AD 1667 by Chikkana and Chennana, the children of Puttasomisetti and Deviramma of Narasimhapura.

It comprises a sanctum, an entrance hall, and a surrounding hall. The sanctum and entrance hall rise higher than the surrounding hall. Its adhisthana consists of the jagati, padyopana, vallipatra, kumuda, kampa, and urdhva-padmavajana mouldings. The Tirthankara image in the sanctum was carved into the rock around the 11th century. The Basadi was formed by adapting the rock face and building a wall in front of it.

Chennanna built the 30-foot manastambha and a 40 x 40-foot pond in front of the Basadi and endowed the village of Jinnenahalli for its maintenance. The Basadi therefore came to be known by his name.

The Basadi has an open hall supported by 24 pillars. A seated relief of Bhagavan Chandranatha is carved on the large rock that forms the southern wall of the sanctum, which is crowned by a small tower.

A male and a female figure representing Puttiswami Shetti and Deviramma, the parents of Chikkanna and Chennanna, are carved on the rock. They face each other with their hands joined in reverence.